ರಾಜ್ಯ ವಿಶೇಷ ಚೇತನರ ಕಾರ್ಯಕರ್ತರ ಸಮಿತಿ ವತಿಯಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೆ ಮನವಿ
ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರುನಲ್ಲಿ ಯು ಆರ್ ಡಬ್ಲ್ಯೂ, ವಿ ಆರ್ ಡಬ್ಲ್ಯೂ, ಎಂ ಆರ್ ಡಬ್ಲ್ಯೂ ಕಾರ್ಯಕರ್ತರಿಗೆ ಕನಿಷ್ಠ ಕಾಯ್ದೆ ವೇತನ ಜಾರಿ ಮಾಡಬೇಕು ಎಂದು ರಾಜ್ಯ ವಿಶೇಷ ಚೇತನರ ಕಾರ್ಯಕರ್ತರ ಸಮಿತಿ ವತಿಯಿಂದ ನ. 2 ರಂದು ಮನವಿ ಸಲ್ಲಿಸಲಾಯಿತು.
ಉಪ ಮುಖ್ಯಮಂತ್ರಿಯವರು ವೇತನ ಹೆಚ್ಚಳ ಮಾಡುವ ಬಗ್ಗೆ ಸಂಬಂಧ ಪಟ್ಟವರಲ್ಲಿ ಮಾತಾಡುತ್ತೇನೆ ಎಂದು ಭರವಸೆ ಕೊಟ್ಟರು.
ಈ ವೇಳೆ ರಾಜ್ಯ ಅಧ್ಯಕ್ಷ ಪ್ರವೀಣ್ ನಾಯಕ್ ಸುಳ್ಯ, ರಾಜ್ಯ ಕಾರ್ಯದರ್ಶಿ ಬಿ.ಎಂ ತಿರುಮಲೇಶ್ವರ, ರಾಜ್ಯ ಜಿಲ್ಲಾ ಸದಸ್ಯ ಕಾರ್ಯಕರ್ತರಾದ ಮುತ್ತಪ್ಪ. ಪೆರಾಬೆ ಮೋನಪ್ಪ, ಅಲಂಕಾರು ಭರತ, ಪುತ್ತೂರು ಅತಿಕಮ್ಮ, ಕೊಯಿಲ ಐಸಿಂತ ಪ್ರಜ್ವಲ್ ವೇಗಸ್, ಶಿಲ್ಪಾ ಕಡಬ ಹಾಜರಿದ್ದರು.
ಪುತ್ತೂರು ಶಾಸಕ ಅಶೋಕ್ ರೈ, ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಕಾರ್ಯದರ್ಶಿ ಮುಸ್ತಫಾ, ಮಾಜಿ ಕೆಪಿಸಿಸಿ ಕಾರ್ಯದರ್ಶಿ ವೆಂಕಪ್ಪ ಗೌಡ ಜೊತೆಗಿದ್ದರು.