ಸುಳ್ಯ- ಕೊಡಿಯಾಲಬೈಲ್ – ದುಗ್ಗಲಡ್ಕ ರಸ್ತೆಯ ಕಮಿಲಡ್ಕದಿಂದ ಕುದ್ಪಾಜೆ ವರೆಗಿನ ಸುಮಾರು 850 ಮೀಟರ್ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ ನಡೆಯುತ್ತಿದ್ದು, ಬಹಳ ದುಸ್ಥರವಾಗಿದ್ದ ರಸ್ತೆಯಲ್ಲಿ ಸಂಚಸುತ್ತಿದ್ದ ನಾಗರಿಕರು ನಿಟ್ಟುಸಿರು ಬಿಡುವಂತೆ ಆಗಿದೆ.
ಕಮಿಲಡ್ಕದ ಎತ್ತರ ರಸ್ತೆಯಿಂದ ಪಿ.ಡಿ.ರಾಧಾಕೃಷ್ಣರ ಮನೆಗೆ ಹೋಗುವ ಅಲ್ಲಿಯವರೆಗೆ ಸುಮಾರು 850 ಮೀಟರ್ ರಸ್ತೆ ಸುಮಾರು 70ಲಕ್ಷ ವೆಚ್ಚದಲ್ಲಿ ಕಾಂಕ್ರೀಟೀಕರಣವಾಗುತ್ತಿದೆ.
ಹಲವು ದಿನಗಳ ಹಿಂದಿಯೇ ಕಾಮಗಾರಿ ಆರಂಭಿಸಲಾಗಿ,ರಸ್ತೆ ಅಗೆಯಲಾಗಿತ್ತು.ಸಿಮೆಂಟ್, ಹೊಯಿಗೆ, ಜಲ್ಲಿ ತಂದು ಹಾಕಲಾಗಿತ್ತು.ಆದರೆ ಸತತ ಮಳೆಯಿಂದಾಗಿ ಕಾಮಗಾರಿ ನಡೆದಿರಲಿಲ್ಲ.ಇದೀಗ ಕಾಮಗಾರಿ ಪ್ರಗತಿಯಲ್ಲಿದ್ದು, ಒಂದೆರಡು ದಿನಗಳಲ್ಲಿ ಕೆಲಸ ಮುಕ್ತಾಯಗೊಳ್ಳಲಿದೆ.ಮತ್ತೆ ಸುಮಾರು 20ದಿನಗಳ ಕ್ಯೂರಿಂಗ್ ಬಳಿಕ ಸಂಚಾರಕ್ಕೆ ಮುಕ್ತಗೊಳ್ಳಲಿದೆ.
ಕಾಮಗಾರಿಗೆ ಸುಮಾರು 70 ಲಕ್ಷ ಬೇಕಾಗುತ್ತದೆ.ಶಾಸಕರ ಅನುದಾನದಿಂದ 10ಲಕ್ಷ, ಸಂಸದರ ಅನುದಾನದಿಂದ 10ಲಕ್ಷ ವಿದ್ದು, ಉಳಿದ ಹಣವನ್ನು ಸರಕಾರದಿಂದ ಬರಿಸಿಕೊಳ್ಳಬೇಕಾಗುತ್ತದೆ.ಪದೇ ಪದೇ ರಸ್ತೆ ಬಂದ್ ಮಾಡುವುದರಿಂದ ಜನರಿಗೆ ತೊಂದರೆಯಾಗುತ್ತದೆ ಎಂಬ ದೃಷ್ಟಿಯಿಂದ ಕಡಿಮೆ ಅನುದಾನ ಇದ್ದರೂ ವಿಸ್ತೃತ ಕಾಮಗಾರಿ ಮಾಡಲಾಗಿದೆ ಎಂದು ಉಬರಡ್ಕ ಮಿತ್ತೂರು ಗ್ರಾ.ಪಂ.ಸದಸ್ಯ ಹರೀಶ್ ಉಬರಡ್ಕ ಹೇಳಿದ್ದಾರೆ.