ಅಡ್ಕಾರಿನಲ್ಲಿ ಬಿ‌.ಎಸ್.ಜಿ ಸೇವಾ‌ ಕೇಂದ್ರ ಉದ್ಘಾಟನೆ

0

ಸುಳ್ಯ – ಅಡ್ಕಾರ್ ಮುಖ್ಯರಸ್ತೆ ಕರಾವಳಿ ಹೋಟೆಲ್ ಬಳಿ ರಾಶೀದ್ ಅಡ್ಕಾರ್ ಮಾಲಕತ್ವದ ಬಿ.ಎಸ್.ಜಿ ಸೇವಾ ಕೇಂದ್ರ ನ.7 ರಂದು ಶುಭಾರಂಭಗೊಂಡಿತು.


ಸೇವಾಕೇಂದ್ರದ ಕಟ್ಟಡವನ್ನು ರಾಶೀದ್ ರವರ ತಂದೆ ಅಬ್ಬಾಸ್ ಪೈಝಿಯವರು ಉದ್ಘಾಟಿಸಿದರು.


ಸೇವಾ ಕೇಂದ್ರದ ಕಛೇರಿಯನ್ನು ಸುಳ್ಯ ವರ್ತಕರ ಸಂಘದ ಅಧ್ಯಕ್ಷರಾದ ಪಿ ಬಿ ಸುಧಾಕರ ರೈ ಯವರು ಉದ್ಘಾಟಿಸಿದರು.


ಉದ್ಘಾಟನ ಸಮಾರಂಭದಲ್ಲಿ ಉದ್ಯಮಿ ಸಂಶುದ್ದೀನ್ ಭಾರತ್ ಶಾಮಿಯಾನ,ನ್ಯಾಯವಾದಿ ನೋಟರಿ ಅಬೂಭಕ್ಕರ್ ಅಡ್ಕಾರ್,ಯುವ ಉದ್ಯಮಿ ಆಲಿ ಅಡ್ಕಾರ್, ಉಸ್ಮಾನ್ ಪಾಜ್,ಜುನೈದ್ ಅಡ್ಕಾರ್, ಸಿದ್ದೀಕ್ ಅಡ್ಕಾರ್,ಬಿ.ಎಸ್.ಸಿ ಮ್ಯಾನೇಜರ್ ಉಮ್ಮರ್ ಪಾರೂಕ್,ಸಾಮಾಜಿಕ ಕಾರ್ಯಕರ್ತ ಬೋಜಪ್ಪ ನಾಯ್ಕ,ಇಬ್ರಾಹಿಂ ಪುಷ್ಪಕ್ ಹಾಜಿ,ಅಶ್ರಫ್ ಮುಸ್ಲಿಯಾರ್,ಸುದ್ದಿ ಬಿಡುಗಡೆ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ, ಎನ್ ಇ ಅಬ್ದುಲ್ಲಾ ಕುಂಞಿ,ಹನೀಫ್ ಜಿ.ಎಂ,ಅಬ್ದುಲ್ಲಾ ಪುತ್ತೂರು, ಅಬ್ಬಾಸ್ ಪೆರಾಜೆ, ಸಿದ್ದೀಕ್ ತಟ್ಟುಕಡ,ಜಯಂತ‌ ಗೌಡ ಕಾಳಂಮನೆ,ದೇವಿ ‌ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು
.

ಸೇವಾಕೇಂದ್ತದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆ ಮತ್ತು ಸವಲತ್ತುಗಳ ಮಾಹಿತಿ ಅದರೊಂದಿಗೆ ಆನ್ಲೈನ್ ಮೂಲಕ ಮಾಡಬೇಕಾದ ಸೇವೆಗಳು,ಸ್ಕಾಲರ್ ಶಿಪ್,ಹಾಸ್ಟೆಲ್ ಅಪ್ಲೈ,ಆರ್ ಟಿ ಸಿ,ಮ್ಯುಟೇಷನ್ ಪ್ರಿಂಟ್,ಟಿಕೆಟ್ ಬುಕ್ಕಿಂಗ್,ಜೆರಾಕ್ಸ್, ಪ್ರಿಂಟಿಂಗ್, ಲ್ಯಾಮೀನೇಶನ್,ಪಾಸ್ ಪೊರ್ಟ್, ಆಧಾರ್ ಕಾರ್ಡ್,ಇನ್ನಿತರ ಎಲ್ಲಾ ತರಹದ ಆನ್ಲೈನ್ ಅಪ್ಲಿಕೇಶನ್ ಸೇವೆ ದೊರೆಯುತ್ತದೆ ಎಂದು ಸಂಸ್ಥೆಯ ಮಾಲಕರು ಈ ಸಂದರ್ಭದಲ್ಲಿ ತಿಳಿಸಿದರು.


ಕಾರ್ಯಕ್ರಮ ರಲ್ಲಿ ಮಾಲಕ ಸರ್ವರನ್ನೂ ರಾಶೀದ್ ಅಡ್ಕಾರ್ ಸ್ವಾಗತಿಸಿ ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.