ಸುಳ್ಯದಿಂದ ಮಂಡೆಕೋಲು ಗ್ರಾಮದ ಪೇರಾಲು ತನಕ ಬರುವ ಕೆ.ಎಸ್.ಆರ್.ಟಿ.ಸಿ. ಬಸ್ ಮುಂದುವರಿದು ಅಡ್ಪಂಗಾಯ ತನಕ ಮುಂದುವರಿಯಲಿ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಎ.ಬಿ.ಅಬ್ಬಾಸ್ ನೇತೃತ್ವದಲ್ಲಿ ಸುಳ್ಯ ಡಿಪ್ಪೋ ಮೆನೇಜರ್ ರಿಗೆ ಮನವಿ ಸಲ್ಲಿಸಲಾಗಿದೆ.
ಸುಳ್ಯ ಅಡ್ಕಾರ್ ಮಾರ್ಗ ವಾಗಿ ಪೇರಾಲಿಗೆ ಬಂದು ತಿರುಗಿ ಹೋಗುವ ಕೆ.ಎಸ್.ಆರ್.ಟಿ.ಸಿ. ಬಸ್ ನ್ನು ಪೇರಾಲಿನಿಂದ ಕುಂಟಿಕಾನ, ಇರುವಂಬಳ್ಳ, ಬಯಂಬು ಮಾರ್ಗ ವಾಗಿ ಅಡ್ಪoಗಾಯ ತನಕ ಬಂದು ಅಡ್ಪoಗಾಯ ದಿಂದ ಅದೇ ದಾರಿಯಲ್ಲಿ ತಿರುಗಿ ಹೋಗುವಂತೆ ಮಾಡಬೇಕು ಎಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ನ.ಪಂ. ಸದಸ್ಯ ಶರೀಫ್ ಕಂಠಿ, ಸ್ಥಳೀಯರಾದ ದೀಪಕ್, ನವೀನ್, ಸುಂದರ ಇವರು ಉಪಸ್ಥಿತರಿದ್ದರು.