ಕಡೆಪಾಲ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

0

ಸಂಪಾಜೆ ಗ್ರಾಮದ ಕಡೆಪಾಲ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯ ಕಾರ್ಯಕ್ರಮವನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ನ ಸದಸ್ಯೆ ಶ್ರೀಮತಿ ಲಿಸ್ಸಿ ಮೊನಾಲಿಸಾ, ಆಶಾ ಕಾರ್ಯಕರ್ತೆ ಶ್ರೀಮತಿ ಮೋಹನಾಂಗಿ, ಬಂಟೋಡಿ ಶ್ರೀಮತಿ ವಸಂತಿ ಸೋಮಶೇಖರ್, ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ಮೋಹಿನಿ, ಹಿರಿಯರಾದ ಶ್ರೀಮತಿ ಹೊನ್ನಮ್ಮ, ಹಾಗೂ ಸ್ತ್ರೀ ಶಕ್ತಿ ಸಂಘದ ಸದಸ್ಯರು ಗಳು ಮಕ್ಕಳ ಪೋಷಕರು, ಪುಟಾಣಿ ಮಕ್ಕಳು, ಅಂಗನವಾಡಿ ಸಹಾಯಕಿ ಶ್ರೀಮತಿ ಹರಿಣಾಕ್ಷಿ ಹಾಜರಿದ್ದರು.

ಮಕ್ಕಳಿಗೆ ಬಹುಮಾನ ವನ್ನು ಆಧ್ಯಾನ್ ಪವರ್ ಸಿಸ್ಟಮ್ ದೊಡ್ಡಡ್ಕ ಇವರು ನೀಡಿದರು. ತಿಂಡಿಯನ್ನು ಶ್ರೀಮತಿ ವಸಂತಿ ಸೋಮಶೇಖರ್ ಬಂಟೋಡಿ ನೀಡಿದರು. ಎಲ್ಲಾ ಮಕ್ಕಳ ಪೋಷಕರು ಸಹಕರಿಸಿದರು., ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಪುಷ್ಪ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಪ್ರೇಮ ಸ್ವಾಗತಿಸು, ಶ್ರೀಮತಿ ಸೌಮ್ಯಕುಮಾರಿ ಧನ್ಯವಾದ ಸಮರ್ಪಣೆ ಮಾಡಿದರು.