ಬ್ರಹ್ಮರಥ ಪಾಸ್ ವ್ಯವಸ್ಥೆ, ಬೀಡಾಡಿ ಎತ್ತುಗಳಿಂದ ತೊಂದರೆ, ರಥೋತ್ಸವ ದ ಸಂದರ್ಭದ ಭದ್ರತೆ ಬಗ್ಗೆ ಚರ್ಚೆ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಸಂದರ್ಭ ರಥೋತ್ಸವ ಸುಸೂತ್ರ ನಿರ್ವಹಣೆಯ ಪ್ರಯುಕ್ತ ಪೂರ್ವಭಾವಿ ಸಭೆ ಇಂದು ನಡೆಯಿತು.
ಈ ಸಂದರ್ಭ ಬ್ರಹ್ಮರಥ ಪಾಸ್, ಬೀಡಾಡಿ ಎತ್ತುಗಳಿಂದ ಆಗುವ ತೊಂದರೆ, ಭದ್ರತಾ ವ್ಯವಸ್ಥೆ ಬಗ್ಗೆ ಚರ್ಚೆ ನಡೆಯಿತು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಸಹಾಯಕ ಉಪನಿರೀಕ್ಷಕ ಕಾರ್ತಿಕ್, ದೇವಸ್ಥಾನದ ಇಂಜಿನಿಯರ್ ಉದಯಕುಮಾರ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಅಚ್ಚುತ ಬಳ್ಪ, ಪವನ್ ಎಂ.ಡಿ ದೇವಸ್ಥಾನದ ಸಿಬ್ಬಂದಿಗಳಾದ ಜಯರಾಮ ರಾವ್, ಪದ್ಮನಾಭ ಶೆಟ್ಟಿಗಾರ್, ನಾಗೇಶ್, ಮಹೇಶ್ ಕುಮಾರ್ , ರಾಮಚಂದ್ರ ಮಾರರ್, ಪುರುಷೋತ್ತಮ, ಬೆಳ್ಯಪ್ಪ, ನೋಣಪ್ಪ ಪಿ.ಡಬ್ಲ್ಯೂ ಡಿ ಯ ಸುಬ್ರಹ್ಮಣ್ಯ, ಸ್ಥಳೀಯರಾದ ಶಿವರಾಮ ರೈ, ಗ್ರಾ.ಪಂ ಸದಸ್ಯರಾದ ರಾಜೇಶ್ ಎನ್ ಎಸ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.