ಪ್ರವಾಸೋದ್ಯಮಕ್ಕೆ ಪ್ರೋತ್ಸಾಹದ ನಿಟ್ಟಿನಲ್ಲಿ ಪುತ್ತೂರು ಮೂಲದ ಯುವಕನ ವಿಶ್ವ ಪರ್ಯಟನೆ

0

ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪುತ್ತೂರು ಮೂಲದ ಸಿನಾನ್ ಎಂಬ ಯುವಕ ಕಳೆದ 2 ವರ್ಷಗಳಿಂದ ತನ್ನ ಸ್ಕೋರ್ಪಿಯೋ ವಾಹನದಲ್ಲಿ ವಿಶ್ವ ಪರಿಯಟನೆ ಮಾಡಿ ಡಿ 3 ರಂದು ತಾಯ್ನಾಡು ಪುತ್ತೂರಿಗೆ ಮರಳಿದ್ದಾರೆ.

ಡಿ 3 ರಂದು ಸಂಜೆ ಸುಳ್ಯ ಮಾರ್ಗವಾಗಿ ಪುತ್ತೂರಿಗೆ ತೆರಳುವ ಮಾಹಿತಿ ತಿಳಿದ ಸುಳ್ಯದ ನೂರಾರು ಅಭಿಮಾನಿಗಳು ಸಿನಾನ್ ಆಗಮನಕ್ಕಾಗಿ ಕಾದು ಅವರು ಸುಳ್ಯಕ್ಕೆ ಬರುತ್ತಿದ್ದಂತೆ ಭರ್ಜರಿ ಸ್ವಾಗತವನ್ನು ನೀಡಿದರು.

ಗಾಂಧಿನಗರ ಮೆಟ್ರೋ ಹೋಟೆಲ್ ಸಮೀಪ, ಕರಾವಳಿ ಮೊಬೈಲ್ ಶಾಪ್ ಬಳಿ, ಓಡಬಾಯಿ ಗ್ರಾಂಡ್ ವೀಲ್ ಟಯರ್ ಶಾಪ್ ಬಳಿ ನೂರಾರು ಅಭಿಮಾನಿಗಳು ಜಮಾಹಿಸಿ ಸಿನಾನ್ ರವರಿಗೆ ಸ್ವಾಗತ ಕೋರಿದರು.
ಭಾರತದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಜಗತ್ತಿನಾದ್ಯಂತ ಭಾರತದ ಮಹೀಂದ್ರಾ ಕಂಪನಿಯ ಸ್ಕಾರ್ಪಿಯೋ ಕಾರು ಮೂಲಕ ಪರ್ಯಟನೆಗೊಳಿಸಿದ್ದಾರೆ.


ಸುಮಾರು ಎರಡು ವರ್ಷಗಳ ವರೆಗೆ ಒಟ್ಟು 67 ಕ್ಕೂ ಹೆಚ್ಚು ದೇಶಗಳನ್ನು ಸುತ್ತಿ ಸರಿ ಸುಮಾರು 1 ಲಕ್ಷ ಕಿ.ಮೀ ಗೂ ಹೆಚ್ಚು ಸ್ಥಳವನ್ನು ಸುತ್ತಿದ್ದಾರೆ. ಭಾರತದ ಹಾಗೂ ಕನ್ನಡದ ಕಂಪನ್ನು ವಿಶ್ವದೆಲ್ಲೆಡೆ ಪಸರಿಸಿ ಪುತ್ತೂರಿಗೆ ಬರುವ ಸಲುವಾಗಿ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿದ್ದಾರೆ.


ಗಾಂಧಿನಗರದಲ್ಲಿ ನ. ಪಂ ಸದಸ್ಯ ಶರೀಫ್ ಕಂಠಿ ನೇತೃತ್ವದಲ್ಲಿ ಸಾಲಿ ಕಟ್ಟೆಕ್ಕಾರ್ಸ್, ಝಿಯಾದ್, ಮನ್ಸೂರ್ ಮಂಚೂ, ನಾಸಿರ್, ಸಿಯಾಬ್ ಕಟ್ಟೆಕ್ಕಾರ್ಸ್, ಇಕ್ಬಾಲ್ ಸುಣ್ಣಮೂಲೆ,ಶಾಯಿದ್ ಗುರುಂಪು,ಝೀಯ, ಹನೀಫ್ ಅಲ್, ನಾಸಿರ್ ಕಟ್ಟೆಕ್ಕಾರ್ಸ್, ಕಬೀರ್ ಕಟ್ಟೆ ಕ್ಕಾರ್ಸ್,ಓಡಬಾಯಿ ಬಳಿ ಗ್ರ್ಯಾಂಡ್ ವ್ಹೀಲ್ ಮಾಲಿಕ ನಿಝಾರ್, ಹುಸ್ನಿ ಮುಬಾರಕ್, ನಝೀರ್ ಶಾಂತಿನಗರ, ಸತ್ತಾರ್ ಪೈಚಾರ್, ಝುಬೈರ್ ಉಬಿ, ಶಿಫಾಝ್, ಶಹದ್, ವಿನಯ, ರಾಕೇಶ್, ಸಮದ್ ಮತ್ತಿತ್ತರು ಉಪಸ್ಥಿತರಿದ್ದರು.