ಕಳಂಜದ ಕೋಟೆಮುಂಡುಗಾರಿನಲ್ಲಿರುವ ಶರವಣಭವ ಸಿಂಗಾರಿ ಮೇಳದಿಂದ ಡಿ. 6-7ರಂದು ಸುಬ್ರಹ್ಮಣ್ಯ ಷಷ್ಠಿಯಲ್ಲಿ ಚೆಂಡೆವಾದನದ ನಡೆಸಿ ಧನ ಸಂಗ್ರಹಿಸಿ, ಹಣವನ್ನು ಅಶಕ್ತರಿಗೆ ನೀಡಲು ನಿರ್ಧಾರಿಸಿದ್ದಾರೆ.
ಅಮರಪಡ್ನೂರು ಗ್ರಾಮದ ಹೊನ್ನೆಕಡ್ಪು ನಿವಾಸಿಯಾಗಿರುವ ದಿ. ಬಾಳು ಎಂಬವರ ಪತ್ನಿ ಸೀತಮ್ಮ ಎಂಬವರು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ.
ಇವರ ಮನೆ ಶಿಥಿಲಾವಸ್ಥೆಯಲ್ಲಿದ್ದು, ಚೆಂಡೆವಾದನದ ನಡೆಸಿ ಮೂಲಕ ಸಂಗ್ರಹವಾದ ಹಣವನ್ನು ಸೀತಮ್ಮನವರ ಮನೆ ನಿರ್ಮಾಣಕ್ಕೆ ಧನ ಸಹಾಯ ನೀಡುವುದಾಗಿ ಪ್ರಕಟಿಸಿದ್ದಾರೆ. ಇದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಮನವಿಯೊಂದಿಗೆ ಕ್ಯೂಆರ್ ಕೋಡ್ ಹರಿಯಬಿಟ್ಟಿದ್ದು, ದಾನಿಗಳು ಧನ ಸಹಾಯ ನೀಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.