ಸುಳ್ಯ ರಥಬೀದಿ ರಸ್ತೆಯಲ್ಲಿ ಕುಡಿಯುವ ನೀರು ಪೈಪ್ ಅಳವಡಿಕೆ ಕಾಮಗಾರಿ : ಮಳೆ ಬಂದು ಕೆಸರಾದ ರಸ್ತೆ

0

ಸುಳ್ಯದಲ್ಲಿ 54 ಕೋಟಿ ರೂ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದ್ದು ಇದೀಗ ಸುಳ್ಯ ರಥಬೀದಿಯಲ್ಲಿ ಕೆಲಸ ನಡೆಯುತ್ತಿದೆ. ಎರಡು ದಿನದಿಂದ ಮಳೆ ಸುರಿಯುತ್ತಿದ್ದು ರಥಬೀದಿ ರಸ್ತೆ ಕೆಸರಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಪೈಪ್ ಅಳವಡಿಕೆ ಕಾಮಗಾರಿಯ ‌ಕುರಿತು ಯೋಜನೆಯ ಇಂಜಿನಿಯರ್ ಶ್ರೀಕಾಂತ್ ರನ್ನು ಸಂಪರ್ಕಿಸಿ ವಿಚಾರಿಸಿದಾಗ, ರಥಬೀದಿ ರಸ್ತೆಯಲ್ಲಿ ಪೈಪ್ ಅಳವಡಿಕೆ ಕಾಮಗಾರಿ ಈಗಾಗಲೇ ಮುಗಿಯಬೇಕಿತ್ತು. ಮಳೆ ಬಂದುದರಿಂದ ಎರಡು ದಿನ ತಡವಾಗಿದೆ. ಆ ರಸ್ತೆಯಲ್ಲಿ ಪೈಪ್ ಅಳವಡಿಕೆ ಆದ ತಕ್ಷಣವೇ ನಾವು ಕಾಂಕ್ರೀಟ್ ಅಗೆದಲ್ಲಿ ಕಾಂಕ್ರೀಟ್ ಹಾಗೂ ಇಂಟರ್ ಲಾಕ್ ತೆಗೆದಲ್ಲಿ ಇಂಟರ್ ಲಾಕ್ ಹಾಕಿ ರಸ್ತೆ ಈ ಹಿಂದೆ ಇದ್ದಂತೆ ಮಾಡಿಕೊಡುತ್ತೇವೆ. ಡಿ.15ರ ಬಳಿಕ‌ ಕಾಂಕ್ರೀಟೀಕರಣ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.