ಪೆರುವಾಜೆ ಗ್ರಾಮ ಪಂಚಾಯತ್ ನ 2023 – 24 ನೇ ಸಾಲಿನ ಜಮಾಬಂಧಿಯು ಡಿ.04 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಸುಳ್ಯ ತೋಟಗಾರಿಕಾ ಇಲಾಖೆಯ ಸಹಾಯಕ ತೋಟಗಾರಿಕಾ ಅಧಿಕಾರಿ ವಿಜೇತ್ ಎಸ್.ರವರು ಜಮಾಬಂದಿ ಅಧಿಕಾರಿಯಾಗಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ ಸ್ವಾಗತಿಸಿ, ವರದಿ ಮಂಡಿಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಪದ್ಮನಾಭ ಶೆಟ್ಟಿ ಪೆರುವಾಜೆ,ಮಾಧವ ಮುಂಡಾಜೆ ಉಪಸ್ಥಿತರಿದ್ದರು.
ಜಮಾಬಂದಿ ನಡೆದ ಬಳಿಕ ಕಂರ್ಬುತ್ತೋಡಿ ಕಾಂಕ್ರೀಟ್ ರಸ್ತೆ ವೀಕ್ಷಿಸಲಾಯಿತು.
ಪಂಚಾಯತ್ ಕಟ್ಟಡದ ಮೇಲೆ ಅಳವಡಿಸಿರುವ ಸೋಲಾರ್ ನ್ನು ವೀಕ್ಷಿಸಲಾಯಿತು.