ಚೌಕಿಯಲ್ಲಿ ಅಪಾರ ಪ್ರಮಾಣದ ಕೃಷಿಬೆಳೆ ಹಾನಿ
ರಾತ್ರಿಯ ವೇಳೆ ಕಾಡಾನೆಯೊಂದು ಮುಖ್ಯರಸ್ತೆಯಾಗಿ ಸಂಚರಿಸಿ, ಪಕ್ಕದ ಕೃಷಿ ತೋಟಕ್ಕೆ ನುಗ್ಗಿ ಕೃಷಿ ಬೆಳೆ ನಾಶಪಡಿಸಿದ ಘಟನೆ ಡಿ.7ರಂದು ರಾತ್ರಿ ದ.ಕ. ಸಂಪಾಜೆ ಗ್ರಾಮದ ಚೌಕಿಯಲ್ಲಿ ಸಂಭವಿಸಿದೆ.
ಮುಖ್ಯರಸ್ತೆಯಾಗಿ ಸಂಚರಿಸಿದ ಆನೆ ಬಳಿಕ ರಸ್ತೆ ಪಕ್ಕದ ಡಾ. ಸೂರ್ಯಕುಮಾರ್ ಅವರ ಬೇಲಿ ಮುರಿದು ಬಾಳೆ , ಕೊಕ್ಕೋ ಕೃಷಿ ಹಾನಿ ಮಾಡಿಧು, , ಹೊಳೆ ಬದಿಯಲ್ಲಿ ಇದ್ದ ಬೈನೆ ಮರವನ್ನು ಮುರಿದು, ಚೌಕಿಯ ರವೀಂದ್ರ ಅವರ ತೋಟದ ಬೇಲಿ ಮುರಿದು ಅವರ ಕೃಷಿ ತೋಟದಲ್ಲಿ ಹಾನಿ ಮಾಡಿದೆ ಎಂದು ತಿಳಿದುಬಂದಿದೆ.