ಆಲೆಟ್ಟಿ ಗ್ರಾಮದ ಭೂತಕಲ್ಲು ತರವಾಡು ಮನೆಯ ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ಮತ್ತು ಉಪ ದೈವಗಳ ಕೋಲವು ಡಿ.7 ರಂದು ನಡೆಯಿತು.
ಡಿ.6 ರಂದು ಶ್ರೀ ವಿಷ್ಣು ಮೂರ್ತಿ ದೈವದ ಕುಲ್ಚಾಟವಾಗಿ ಪೊಟ್ಟನ್ ದೈವದ ಕೋಲವು ನಡೆಯಿತು. ಮರುದಿನ ಬೆಳಿಗ್ಗೆ ಶ್ರೀ ರಕ್ತೇಶ್ವರಿ ದೈವದ ಹಾಗೂ ಶ್ರೀ ವಿಷ್ಣು ಮೂರ್ತಿ ದೈವದಕೋಲವಾಗಿ ಪ್ರಸಾದ ವಿತರಣೆಯಾಗಿ ಅನ್ನ ಸಂತರ್ಪಣೆ ಯಾಯಿತು. ಸಂಜೆ ಶ್ರೀ ಗುಳಿಗ ದೈವದ ಕೋಲವು ನಡೆಯಿತು.
ಈ ಸಂದರ್ಭದಲ್ಲಿ ಕುಟುಂಬದ ಯಜಮಾನರು ಹಾಗೂ ಭೂತಕಲ್ಲು ಮನೆಯ ಹಿರಿಯರು ಮತ್ತು ಕುಟುಂಬಸ್ಥರು, ನಾರ್ಕೋಡು ಕುಟುಂಬಸ್ಥರು ಭಾಗವಹಿಸಿದರು.