ಬಾಂಜಿಕೋಡಿ ಹೊಳೆಗೆ ಬಿದ್ದ ರಿಕ್ಷಾ – ಅಪಾಯದಿಂದ ಪಾರು

0

ಬಾಂಜಿಕೋಡಿಯಲ್ಲಿ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಹೊಳೆಗೆ ಬಿದ್ದ ಘಟನೆ ಡಿ.8 ರಂದು ಮುಂಜಾನೆ ನಡೆದಿದೆ.
ಸುಳ್ಯ ಕಡೆಯಿಂದ ಐವರ್ನಾಡಿಗೆ ಬಂದು ವಾಪಾಸು ಸುಳ್ಯ ಕಡೆಗೆ ಶಶಿ ಗಾಂಧಿನಗರ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ರಿಕ್ಷಾ ರಸ್ತೆ ಬದಿಯ ಹೊಳೆಗೆ ಬಿದ್ದಿತು.
ಪರಿಣಾಮ ರಿಕ್ಷಾ ನಜ್ಜುಗುಜ್ಜಾಗಿದ್ದು ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿರುವುದಾಗಿ ತಿಳಿದು ಬಂದಿದೆ.
ಬಳಿಕ ರಿಕ್ಷಾವನ್ನು ಸ್ಥಳೀಯರು ಸೇರಿ ಹೊಳೆಯಿಂದ ಮೇಲಕ್ಕೆತ್ತಿದ್ದಾರೆ.