ವಿಭಾಗೀಯ ಮಟ್ಟದ ಥ್ರೋಬಾಲ್ ಪಂದ್ಯಾಟ : ನಾಲ್ಕು ವಿಭಾಗದಲ್ಲಿಯೂ ದಕ್ಷಿಣ ಕನ್ನಡ ಚಾಂಪಿಯನ್

0

ಡಿ.11ರಂದು ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜಿನ ನೇತೃತ್ವದಲ್ಲಿ ನಡೆದ ವಿಭಾಗೀಯ ಮಟ್ಟದ ಥ್ರೋಬಾಲ್ ಪಂದ್ಯಾಟದ ನಾಲ್ಕು ವಿಭಾಗದಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆ ಚಾಂಪಿಯನ್ ಆಗಿದೆ.

17ರ ವಯೋಮಾನ ಹುಡುಗರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದರೆ, ಮೈಸೂರು ದ್ವಿತೀಯ ಸ್ಥಾನ ಪಡೆಯಿತು.

ಅಕ್ಷತ್ ಶೆಟ್ಟಿ ದಕ್ಷಿಣ ಕನ್ನಡ ಬೆಸ್ಟ್ ಥ್ರೋವರ್, ಬೆಸ್ಟ್ ರಿಸೀವರ್ ದುಷ್ಯಂತ್ ಮೈಸೂರು‌ ಜಿಲ್ಲೆ. ಬೆಸ್ಟ್ ಆಲ್ ರೌಂಡರ್ ಚಿಂತನ್ ದಕ್ಷಿಣ ಕನ್ನಡ ಜಿಲ್ಲೆ ಪಡೆದುಕೊಂಡರು.

17ರ ವಯೋಮಾನದ ‌ಹುಡುಗಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನವನ್ನು ಮಂಡ್ಯ ಜಿಲ್ಲೆ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಪಂದ್ಯಾಟದಲ್ಲಿ ಬೆಸ್ಟ್ ಥ್ರೋವರ್ ಆಗಿ ಫಾತಿಮ ರಿದಾ ದ.ಕ. ಜಿಲ್ಲೆ, ಬೆಸ್ಟ್ ರಿಸೀವರ್ ಆಗಿ ಚಂದನ ಮಂಡ್ಯ ಜಿಲ್ಲೆ, ಬೆಸ್ಟ್ ಆಲ್ ರೌಂಡರ್ ಆಗಿ ಪ್ರಿಯಾಂಕ ದ.ಕ. ಜಿಲ್ಲೆ ಪ್ರಶಸ್ತಿ ಪಡೆದುಕೊಂಡರು.

14ರ ವಯೋಮಾನದ ಹುಡುಗರ ವಿಭಾಗದಲ್ಲಿ ದಕ್ಷಿಣ ‌ಕನ್ನಡ ಪ್ರಥಮ ಸ್ಥಾನ ಪಡೆದರೆ, ಚಿಕ್ಕಮಗಳೂರು ಜಿಲ್ಲೆ ದ್ವಿತೀಯ ಸ್ಥಾನ ಪಡೆಯಿತು.
ಪಂದ್ಯಾಟದಲ್ಲಿ ಬೆಸ್ಟ್ ಥ್ರೋವರ್ ಸಲೀನ್ ದ.ಕ. ಜಿಲ್ಲೆ , ಬೆಸ್ಟ್ ರಿಸೀವರ್ ಆಗಿ ಜ್ಞಾನೇಶ್ ಚಿಕ್ಕಮಗಳೂರು ಜಿಲ್ಲೆ , ಬೆಸ್ಟ್ ಆಲ್ ರೌಂಡರ್ ಆಗಿ ಶಿಶಿರ್ ದ.‌ಕ. ಜಿಲ್ಲೆ ಮೂಡಿಬಂದರು.

14 ವಯೋಮಾನದ ಹುಡುಗಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಪ್ರಥಮ ಸ್ಥಾನ ಪಡೆದರೆ, ಮೈಸೂರು‌ ಜಿಲ್ಲೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪಂದ್ಯಾಟದಲ್ಲಿ ಬೆಸ್ಟ್ ಥ್ರೋವರ್ ಆಗಿ ಆಯಿಷತ್ ಹಿಬಾ ದಕ್ಷಿಣ ಕನ್ನಡ ಜಿಲ್ಲೆ, ಬೆಸ್ಟ್ ರಿಸೀವರ್ ಆಗಿ ಆದ್ಯ ದ.ಕ. ಜಿಲ್ಲೆ, ಬೆಸ್ಟ್ ಆಲ್ ರೌಂಡರ್ ಆಗಿ ಅಕ್ಷತಾ ಹೆಚ್.ಆರ್. ಮೈಸೂರು ಜಿಲ್ಲೆ ಪ್ರಶಸ್ತಿ ಪಡೆದುಕೊಂಡರು.