ಡಿ. 16 : ಸೌರ ವಿದ್ಯುತ್ ಯೋಜನೆಗಳ ಕುರಿತು ಕಾರ್ಯಾಗಾರ,ಸ್ವ ಉದ್ಯೋಗ ಮಾಹಿತಿ ಹಾಗೂ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯ ನೋಂದಣಿ ಕಾರ್ಯಕ್ರಮ

0

ಪ್ರಣವ ಚಾರಿಟೇಬಲ್ ಟ್ರಸ್ಟ್ ಮಂಗಳೂರು ( ಪ್ರಣವ ಸೌಹಾರ್ದ ಸಹಕಾರಿ ಸಂಘ‌ ನಿ. ಇದರ ಅಂಗ ಸಂಸ್ಥೆ) ಮತ್ತು ಸುಳ್ಯ ರೈತ ಉತ್ಪಾದಕ ಸಂಸ್ಥೆಯ ಸಹಯೋಗದೊಂದಿಗೆ ಸೆಲ್ಕೋ ಸೋಲಾರ್ ಪ್ರೈವೇಟ್ ಲಿಮಿಟೆಡ್ ಇದರ ವತಿಯಿಂದ ಡಿ. 16 ರಂದು ಬೆಳಗ್ಗೆ ಸುಳ್ಯದ ಎ.ಪಿ.ಎಂ.ಸಿ ಸಭಾಂಗಣದಲ್ಲಿ ರೈತಾಪಿ ಜನರ ಹಾಗೂ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರ ಪ್ರಯೋಜನಕ್ಕಾಗಿ ಸೌರ ವಿದ್ಯುತ್ ಬಗ್ಗೆ ಸಮಗ್ರ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ,ಸಾಲ ಸೌಲಭ್ಯ ಮಾಹಿತಿ, ಸ್ವ ಉದ್ಯೋಗ ಮಾಹಿತಿ ಮತ್ತು ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯ ನೋಂದಣಿ ಕಾರ್ಯಾಗಾರ ನಡೆಯಲಿದೆ.

ಎಲ್ಲಾ ರೈತಾಪಿ ಬಂಧುಗಳು ಹಾಗೂ ಉದ್ದಿಮೆದಾದರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಕಾರ್ಯಕ್ರಮ ಸಂಯೋಜಕರು ಕೋರಿದ್ದಾರೆ.

ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಗೆ‌ ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು

1.ಇತ್ತೀಚಿನ ವಿದ್ಯುತ್ ಬಿಲ್
2.ಅರ್ಜಿದಾರರ ಸರ್ಕಾರಿ ಗುರುತಿನ ಪತ್ರ
3.ಬ್ಯಾಂಕ್ ವಿವರಗಳು(ಪಾಸ್ ಬುಕ್ ಅಥವಾ ರದ್ದುಗೊಳಿಸಿದ ಚೆಕ್)