ನಾಗಪಟ್ಟಣ ಡ್ಯಾಂ ಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಾಮಕರಣ ಮಾಡುವಂತೆ ಮನವಿ

0

ಸುಳ್ಯ ನಗರಕ್ಕೆ ಕುಡಿಯುವ ನೀರಿನ ಯೋಜನೆಗೆ ನಾಗಪಟ್ಟಣ ಬಳಿ ಪಯಸ್ವಿನಿ ನದಿಗೆ ನಿರ್ಮಿಸಿರುವ ಆಣೆಕಟ್ಟಿಗೆ ಮಾಜಿಪ್ರಧಾನಿ ಭಾರತ ರತ್ನ ಪುರಸ್ಕೃತ ಅಟಲ್ ಬಿಹಾರಿ ವಾಜಪೇಯಿ ನಾಮಕರಣ ಮಾಡುವಂತೆ ಅಪೇಕ್ಷಿಸಿ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಮತ್ತು ಉಪಾಧ್ಯಕ್ಷ ಬುದ್ಧ ನಾಯ್ಕ್ ರವರ ಮೂಲಕ ಡಿ.16 ರಂದು ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿಗಳ ಸಂಚಾಲಕ ಕೆ. ಕೆ. ಬಾಲಕೃಷ್ಣ ಸೀತಾರಾಮ್ ನಾಯಕ್ ಓಡಬಾಯಿ, ಶ್ರೀನಿವಾಸ್ ರಾವ್ , ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು ,ಕಿಶನ್ ಹಳಗೇಟು,ನಾರಾಯಣ ಶಾಂತಿನಗರ ಮತ್ತಿತರರು ಉಪಸ್ಥಿತರಿದ್ದರು.