ಸುಳ್ಯ ಹಳೆಗೇಟು ನಿವಾಸಿ ಎಂ.ಸುಂದರ ರಾವ್ ರಿಂದ ಯತೀಶ್ ಕುಮಾರ್ ಕೆ.ಸಿ ಎಂಬವರು ರೂ.3 ಲಕ್ಷ ಸಾಲ ಪಡೆದು ಎಸ್.ಬಿ.ಐ ಚೆಕ್ ನೀಡಲಾಗಿದ್ದು ಚೆಕ್ ಅಮಾನ್ಯಗೊಂಡಿದ್ದು ಸುಳ್ಯ ನ್ಯಾಯಾಲಯದ ಲ್ಲಿ ಫಿರ್ಯಾದುದಾರರಾದ ಸುಂದರ ರಾವ್ ರವರು ಕೇಸು ದಾಖಲಿಸಿದ್ದರು.
ನ್ಯಾಯಾಲಯವು ಸದ್ರಿ ಕೇಸಿನ ವಿಚಾರಣೆ ನಡೆಸಿ ಆರೋಪಿ ಯತೀಶ್ ಕುಮಾರ್ ಕೆ.ಸಿ ಯವರಿಗೆ ದಂಡ ವಿಧಿಸಿ ರೂ.3.05 ಲಕ್ಷ ಪಾವತಿಸುವಂತೆ, ವಿಫಲವಾದಲ್ಲಿ 3 ತಿಂಗಳ ಸಾದ ಸೆರೆಮನೆ ವಾಸ ಅನುಭವಿಸುವಂತೆ ಮಾನ್ಯ ನ್ಯಾಯಾಲಯವು ಆದೇಶ ಮಾಡಿರುವುದಾಗಿ ತಿಳಿದು ಬಂದಿದೆ. ಪ್ರಕರಣದ ಫಿರ್ಯಾದುದಾರರ ಪರವಾಗಿ ನ್ಯಾಯವಾದಿ ಪಿ.ಭಾಸ್ಕರ ರಾವ್ ವಾದಿಸಿದ್ದರು.