ಸುಳ್ಯ ಜೂನಿಯರ್ ಕಾಲೇಜು ರಸ್ತೆಯಲ್ಲಿರುವ ಜೇನು ಸೊಸೈಟಿ ಹಿಂಭಾಗದಲ್ಲಿರುವ ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ಎಂ ಬಿ ಫೌಂಡೇಶನ್ ವತಿಯಿಂದ ಉಚಿತ ಕಿವಿಯ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರ ವಿತರಣೆ ಕಾರ್ಯಕ್ರಮ ಡಿ.16 ರಂದು ನಡೆಯಿತು.















ತಪಾಸಣೆ ಶಿಬಿರವನ್ನು ಖ್ಯಾತ ವೈದ್ಯೆ ಡಾ.ಅಂಕಿತ ಉದ್ಘಾಟಿಸಿದರು. ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ, ಸಾಂದೀಪ್ ವಿಶೇಷ ಶಾಲೆ ಮುಖ್ಯೋಪಾಧ್ಯಾಯಿನಿ ಹರಿಣಿ ಸದಾಶಿವ, ಶ್ರವಣ ಯಂತ್ರ ವಿತರಣೆ ಕಾರ್ಯಕ್ರಮದ ಸಂಯೋಜಕರಾದ ಎಂ.ಬಿ.ಫೌಂಡೇಶನ್ ಟ್ರಸ್ಟಿ ಶರೀಫ್ ಜಟ್ಟಿಪಳ್ಳ ಉಪಸ್ಥಿತರಿದ್ದರು.
ಸುಮಾರು 40 ಮಂದಿ ಉಚಿತ ಕಿವಿಯ ಶ್ರವಣ ತಪಾಸಣೆಯ ಸದುಪಯೋಗ ಪಡೆದು ಕೊಂಡರು. ಅದರಲ್ಲಿ 20 ಮಂದಿಗೆ ಎಂ.ಬಿ.ಫೌಂಡೇಶನ್ ಸಹಕಾರದೊಂದಿಗೆ ಸಂಸ್ಥೆಯ ದೇಣಿಗೆ ಮೊತ್ತದಿಂದ 40% ರಿಯಾಯಿತಿಯಲ್ಲಿ ಶ್ರವಣ ಯಂತ್ರವನ್ನು ಅಳವಡಿಸುವುದಕ್ಕೆ ಮುಂದಾಗಿದ್ದಾರೆ ಎಂದು ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ ತಿಳಿಸಿದ್ದಾರೆ.









