ಜೇಸಿಯಿಂದ ಸಮಾಜಮುಖಿ ಚಿಂತನೆ ಬೆಳೆಸುವ ಕಾರ್ಯ : ಚಂದ್ರಹಾಸ ರೈ
ಸಮುದಾಯ ಅಭಿವೃದ್ಧಿಯ ಗುರಿಯೊಂದಿಗೆ ಯುವಕರಲ್ಲಿ ನಾಯಕತ್ವ ಗುಣ ತುಂಬಿಸಿ ಜೇಸಿ ಸಂಸ್ಥೆಯು ಸಮಾಜಮುಖಿ ಚಿಂತನೆ ಬೆಳೆಸುವ ಕಾರ್ಯ ಮಾಡುತ್ತಿದೆ ಎಂದು ಜೇಸಿಐ ವಲಯ 15ರ ಪೂರ್ವ ವಲಯಾಧ್ಯಕ್ಷ ಚಂದ್ರಹಾಸ ರೈ ಹೇಳಿದರು.
ಅವರು ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಜೇಸಿಐ ಬೆಳ್ಳಾರೆ ಘಟಕದ 2025ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬೆಳ್ಳಾರೆ ಜೇಸಿಐ ಘಟಕದ 2025ನೇ ಸಾಲಿನ ನೂತನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ರೈ ಬೀಡು ಅವರಿಗೆ ನಿಕಟಪೂರ್ವಧ್ಯಕ್ಷ ಜಗದೀಶ್ ರೈ ಪೆರುವಾಜೆ ಅಧಿಕಾರ ಹಸ್ತಾಂತರಿಸಿದರು. ನೂತನ ಕಾರ್ಯದರ್ಶಿಯಾದ ಉಮೇಶ್ ಮಣಿಕ್ಕಾರ ಅವರಿಗೆ ಕಾರ್ಯದರ್ಶಿ ವಾಸುದೇವ ಪೆರುವಾಜೆ ಅಧಿಕಾರ ಹಸ್ತಾಂತರಿಸಿದರು. ವಲಯ 15ರ 2025ನೇ ಸಾಲಿನ ವಲಯಾಧ್ಯಕ್ಷ ಅಭಿಲಾಷ್ ಬಿ.ಎ ಘಟಕಕ್ಕೆ ಸೇರಿದ ಹೊಸ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ ಶುಭಹಾರೈಸಿದರು.
ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು,ವಲಯ 15ರ 2025ನೇ ವಲಯ ಉಪಾಧ್ಯಕ್ಷ ಸುಹಾಸ್ ಎ ಪಿ ಮರಿಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು. ಪೂರ್ವಾಧ್ಯಕ್ಷ ರವೀಂದ್ರನಾಥ ಶೆಟ್ಟಿ ಅಜಪಿಲ ಉಪಸ್ಥಿತರಿದ್ದರು.
2025ನೇ ಸಾಲಿನ ಬೆಳ್ಳಾರೆ ಜೇಸಿಐ ಘಟಕಾಡಳಿತ ಮಂಡಳಿಯ ನಿಕಟಪೂರ್ವಧ್ಯಕ್ಷರಾಗಿ ಜಗದೀಶ್ ರೈ ಪೆರುವಾಜೆ, ಉಪಾಧ್ಯಕ್ಷರುಗಳಾಗಿ ಶಿವಕುಮಾರ್ ರೈ ಮಣಿಕ್ಕಾರ, ಪೂರ್ಣಿಮಾ ಟಿ, ಅನಿತಾ ಪದ್ಮನಾಭ, ಶೇಷಪ್ಪ ಮಠತ್ತಡ್ಕ, ಪ್ರವೀಣ್ ಕುಮಾರ್, ಜತೆ ಕಾರ್ಯದರ್ಶಿಯಾಗಿ ವೇದಿತ್ ರೈ ಎಂ, ಖಾಜಾoಜಿಯಾಗಿ ಗಣೇಶ್ ಕುಲಾಲ್ ತಡಗಜೆ, ನಿರ್ದೇಶಕರುಗಳಾಗಿ ವಾಸುದೇವ ಪೆರುವಾಜೆ, ಭವ್ಯ, ರಮೇಶ್ ಎಂ, ಪುರುಷೋತ್ತಮ ಪೆರುವಾಜೆ,ಯಾಹಿಯಾ ಬೆಳ್ಳಾರೆ ಅಧಿಕಾರ ವಹಿಸಿಕೊಂಡರು.
ವರದಿ : ಉಮೇಶ್ ಮಣಿಕ್ಕಾರ