ಬೀಡಾಡಿ ದನಗಳಿಂದ ಕೃಷಿ ಹಾನಿ : ಅಜ್ಜಾವರ ಪಂಚಾಯತ್ ದೂರು ನೀಡಿದ ಕೃಷಿಕರು

0

ಕಳೆದ ಒಂದೂವರೆ ತಿಂಗಳಿನಿಂದ ಎರಡು ಹಸುಗಳು ಕೃಷಿ ತೋಟಕ್ಕೆ ಬಂದು ಕೃಷಿ ಹಾನಿಗೊಳಿಸುತ್ತಿದೆ. ಸೂಕ್ತ ಕ್ರಮಕೈಗೊಳ್ಳಿ ಎಂದು ಕೃಷಿಕರೊಬ್ಬರು ಅಜ್ಜಾವರ ಗ್ರಾಮ ಪಂಚಾಯತ್ ಗೆ ದೂರು ನೀಡಿದ ಘಟನೆ ವರದಿಯಾಗಿದೆ.

ಅಜ್ಜಾವರ ಮೇನಾಲದ ಕೃಷಿರಾದ ಜವರೇಗೌಡ ಎಂಬವರು ಡಿ.16ರಂದು ಗ್ರಾಮ ಪಂಚಾಯತ್ ಗೆ ದೂರು‌ನೀಡಿದ್ದು ಎರಡು ಹಸುಗಳು ನಮ್ಮ‌ಕೃಷಿ ತೋಟಕ್ಕೆ ಬಂದು, ಅಡಕೆ ಗಿಡಗಳನ್ನು ಹಾಗೂ ತರಕಾರಿ ಗಿಡಗಳನ್ನು ಹಾಳು‌ಮಾಡುತ್ತಿವೆ. ಓಡಿಸಿದರೂ ಮತ್ತೆ ಬರುತ್ತಿವೆ. ಈ ಕುರಿತು ಪಂಚಾಯತ್ ಸೂಕ್ತ ಕ್ರಮಕೈಗೊಳ್ಳುವಂತೆ ಅರ್ಜಿಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೆ ಮಾಹಿತಿ ನೀಡಿದ ಪಂಚಾಯತ್ ಪಿಡಿಒ ರವರು, ಜವರೇಗೌಡ ಎಂಬವರು ದೂರು ನೀಡಿದ್ದಾರೆ. ಆ ದನಗಳ ವಾರಸುದಾರರು ಆ ದನವನ್ನು ಕೊಂಡುಹೋಗಬೇಕು ಎಂದು ಕೇಳಿಕೊಂಡಿದ್ದಾರೆ.