ಶಿವಾಜಿ ಯುವಕ ಮಂಡಲ (ರಿ.) ಕೂತ್ಕುಂಜ ,ಪರಿವಾರ ಪಂಜ ರೈತ ಉತ್ಪಾದಕ ಕಂಪೆನಿ ಲಿ. ಪಂಜ ಇದರ ಜಂಟಿ ಆಶ್ರಯದಲ್ಲಿ
ಎಲೆ ಚುಕ್ಕಿ ರೋಗ ನಿರ್ವಹಣೆ ಮತ್ತು ಉಚಿತ ತರಕಾರಿ ಬೀಜ ವಿತರಣಾ ಕಾರ್ಯಕ್ರಮಡಿ.17 ರಂದು ಕೂತ್ಕುಂಜ ಅಟಲ್ ಜೀ ಕ್ರೀಡಾಂಗಣದಲ್ಲಿ ನಡೆಯಿತು.
ಪ್ರಗತಿ ಪರ ಕೃಷಿಕ ದಿವಾಕರ ಬಿಳಿಮಲೆ ಉದ್ಘಾಟಿಸಿದರು.ಶಿವಾಜಿ ಯುವಕ ಮಂಡಲದ ಅಧ್ಯಕ್ಷ ಆದರ್ಶ ಚಿದ್ಗಲ್ಲು ಸಭಾಧ್ಯಕ್ಷತೆ ವಹಿಸಿದ್ದರು.ಸಂಪನ್ಮೂಲ ವ್ಯಕ್ತಿಗಳಾಗಿ ಪಂಜ ಪರಿವಾರ ಪಂಜ ರೈತ ಉತ್ಪಾದಕ ಕಂಪೆನಿ ಲಿ ಅಧ್ಯಕ್ಷ ತೀರ್ಥಾನಂದ ಕೊಡೆಂಕಿರಿ,ಪ್ರಗತಿಪರ ತರಕಾರಿ ಬೆಳೆಗಾರಾದ ಚಂದ್ರಶೇಖರ ಸುಬ್ರಾಯ ಮೂಲೆ, ಹರಿಯಪ್ಪ ಗೌಡ ಶೆಟ್ಟಿಗದ್ದೆ ಹಾಗೂ ಪಂಜ ರೈತ ಉತ್ಪಾದಕ ಕಂಪೆನಿ ಲಿ ನಿರ್ದೇಶಕ ಕಾರ್ಯಪ್ಪ ಗೌಡ ಚಿದ್ಗಲ್ಲು, ಶಿವಾಜಿ ಯುವಕ ಮಂಡಲದ ಕಾರ್ಯಕ್ರಮದಲ್ಲಿ ಲಿಖಿತ್ ಅಜ್ಜಿಹಿತ್ಲು , ಸ್ಥಾಪಕಾಧ್ಯಕ್ಷ ಯೋಗೀಶ್ ಚಿದ್ಗಲ್ಲು
ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯೋಗೀಶ್ ಚಿದ್ಗಲ್ಲು ಸ್ವಾಗತಿಸಿದರು. ಜಯರಾಮ ಕಲ್ಲಾಜೆ ನಿರೂಪಿಸಿದರು. ಲಿಖಿತ್ ಅಜ್ಜಿಹಿತ್ಲು ವಂದಿಸಿದರು.