ಚೆಕ್ ಅಮಾನ್ಯ ಪ್ರಕರಣ: ಆರೋಪ ಸಾಬೀತು

0

ಸುಬ್ರಹ್ಮಣ್ಯ ಸಹಕಾರ ಸಂಘ ನಿ.ಸುಳ್ಯ ಶಾಖೆಯಿಂದ ವಾಹನ ಖರೀದಿ ಬಾಬ್ತು ಹರೀಶ್ ಎಂಬವರು ರೂ. 1.31,661 ಲಕ್ಷ ಸಾಲ ಪಡೆದು ಮೊಬಲಗಿಗೆ ಹೆಚ್.ಎಫ್.ಡಿ.ಸಿ ಬ್ಯಾಂಕ್ ಚೆಕ್ ನೀಡಲಾಗಿದ್ದು ಚೆಕ್ ಅಮಾನ್ಯಗೊಂಡಿದ್ದು ಸುಳ್ಯ ನ್ಯಾಯಾಲಯದ ಲ್ಲಿ ಫಿರ್ಯಾದುದಾರರಾದ ಸುಬ್ರಹ್ಮಣ್ಯ ಸಹಕಾರ ಸಂಘ ನಿ. ಸುಳ್ಯ ಶಾಖೆಯವರು ಆರೋಪಿ ಹರೀಶ್ ರವರ ಮೇಲೆ ಕೇಸು ದಾಖಲಿಸಿದ್ದರು. ನ್ಯಾಯಾಲಯವು ಸದ್ರಿ ಕೇಸಿನ ವಿಚಾರಣೆ ನಡೆಸಿ ಆರೋಪಿ ಹರೀಶ್ ರವರ ಮೇಲೆ ದಂಡ ವಿಧಿಸಿ ರೂ.1,31,661 ಲಕ್ಷ ಪಾವತಿಸುವಂತೆ, ವಿಫಲವಾದಲ್ಲಿ 6
ತಿಂಗಳ ಸಾದ ಸೆರೆಮನೆ ವಾಸ ಅನುಭವಿಸುವಂತೆ ಮಾನ್ಯ ನ್ಯಾಯಾಲಯವು ಆದೇಶ ಮಾಡಿರುವುದಾಗಿ ತಿಳಿದು ಬಂದಿದೆ. ಪ್ರಕರಣದ ಫಿರ್ಯಾದುದಾರರ ಪರವಾಗಿ ನ್ಯಾಯವಾದಿ ಪಿ.ಭಾಸ್ಕರ ರಾವ್ ವಾದಿಸಿದ್ದರು.