ಸುಳ್ಯ ಶಿಕ್ಷಣ ಸಂಪನ್ಮೂಲ ಕೇಂದ್ರ ಹಾಗೂ ಸುಳ್ಯ ಪ್ರೆಸ್ ಕ್ಲಬ್ ಹಾಗೂ ಪೊಲೀಸ್ ಇಲಾಖೆ ಆಶ್ರಯದಲ್ಲಿ ಮಕ್ಕಳ ಮಾಸೋತ್ಸವ 2024

0

ಪೊಲೀಸ್ ಇಲಾಖಾಧಿಕಾರಿ ಹಾಗೂ ಮಾಧ್ಯಮ ವರದಿಗಾರರಿಂದ ಮಕ್ಕಳ ಹಕ್ಕುಗಳ ಕುರಿತು ಸಂವಾದ

ಹಿರಿಯ ಪತ್ರಕರ್ತ ಹರೀಶ್ ಬಂಟ್ವಾಳ್ ಹಾಗೂ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರುಗಳಿಗೆ ಸನ್ಮಾನ

ಸುಳ್ಯ ಶಿಕ್ಷಣ ಸಂಪನ್ಮೂಲ ಕೇಂದ್ರ ಹಾಗೂ ದ ಕ ಜಿಲ್ಲಾ ಒಕ್ಕೂಟ (ರಿ.),ಮಕ್ಕಳ ಮಾಸೋತ್ಸವ ಸಮಿತಿ, ಪೊಲೀಸ್ ಇಲಾಖೆ ಸುಳ್ಯ, ಪ್ರೆಸ್ ಕ್ಲಬ್ ಸುಳ್ಯ ವಿದ್ಯಾ ಸಂಸ್ಥೆ ಸುಳ್ಯ ಇದರ ನೇತೃತ್ವದಲ್ಲಿ ‘ಪಡಿ’ ಸಂಸ್ಥೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಡಿ 19 ರಂದು ಮಕ್ಕಳ ಮಾಸೋತ್ಸವ-2024 ರ ಅಂಗವಾಗಿ ಮಕ್ಕಳ ಹಕ್ಕುಗಳ ಕುರಿತು ಪೊಲೀಸ್ ಇಲಾಖೆ ಹಾಗೂ ಮಾಧ್ಯಮ ವರದಿಗಾರರ ಸಂವಾದ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮ ಸುಳ್ಯ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನ ಪಂ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎ ನೀರಬಿದಿರೆ ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಮಕ್ಕಳ ಹಕ್ಕು ಹಾಗೂ ರಕ್ಷಣೆಯಲ್ಲಿ ಸಮಾಜ ಪಾತ್ರದ ಬಗ್ಗೆ ಮಾತನಾಡಿ ಕಾರ್ಯಕ್ರಮಕ್ಕೆ ಶುಭಾರೈಸಿದರು.

ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯಕ್ ಭಾಗವಹಿಸಿ ಮಾತನಾಡಿ ‘ಮಕ್ಕಳ ಹಕ್ಕು ಮತ್ತು ಅವರ ರಕ್ಷಣೆಗೆ ಸಂಭಂದಿಸಿ ಮಕ್ಕಳಿಗೆ ಏನಾದರು ತೊಂದರೆಯಾದಾಗ ವರದಿ ಮಾಡುವ ವೇಳೆ ಮಾಧ್ಯಮ ಮಿತ್ರರು ಏನೆಲ್ಲಾ ನಿಯಮಗಳನ್ನು ಪಾಲಿಸಬೇಕು ಮತ್ತು ಮಕ್ಕಳ ವಿಚಾರದಲ್ಲಿ ಸಾರ್ವಜನಿಕರು ಏನೆಲ್ಲಾ ರೀತಿಯಲ್ಲಿ ಮಕ್ಕಳ ರಕ್ಷಣಾ ಕಾರ್ಯದಲ್ಲಿ ತೊಡಗಿಸಿ ಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಯೊಂದಿಗೆ ಮಾಧ್ಯಮ ವರದಿಗಾರರು ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ದೀರ್ಘ ಸಂವಾದ ನಡೆದು ಬಹಳ ಪೂರಕವಾದ ವಿಷಯಗಳ ಕುರಿತು ಚರ್ಚೆಗಳು ನಡೆಯಿತು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ದ. ಕ ಜಿಲ್ಲಾ ಮಕ್ಕಳ ಮಾಸೋತ್ಸವ ಸಮಿತಿ ಸಂಚಾಲಕಿ ಶ್ರೀಮತಿ ಆಶಾಲತಾ ಸುವರ್ಣ,
ಸಿ ಡಿ ಪಿ ಓ ಶ್ರೀಮತಿ ಶೈಲಜಾ, ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸದಸ್ಯ ಅಡ್ವಕೇಟ್ ಅಬೂಬಕ್ಕರ್ ಅಡ್ಕಾರ್, ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂವಾದದಲ್ಲಿ ಭಾಗವಹಿಸಿದರು.

ಸುಳ್ಯ ತಾಲೂಕು ವೈದ್ಯಾಧಿಕಾರಿ ಡಾ.ನಂದ ಕುಮಾರ್ ಸುಳ್ಯ,ನ. ಪಂ ಸದಸ್ಯರಾದ ಶ್ರೀಮತಿ ಶೀಲಾ ಅರುಣ್ ಕುರುಂಜಿ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಕೊಯಿಂಗೋಡಿ, ಮಕ್ಕಳ ಮಾಸೋತ್ಸವ ಜಿಲ್ಲಾ ಸಮಿತಿ ಸದಸ್ಯೆ ಪ್ರೇಮಿ ಫರ್ನಾಂಡಿಸ್ ರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.


ಸುಳ್ಯ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಶಂಕರ್ ಪೆರಾಜೆ ಪ್ರಾಸ್ತವಿಕ ಮಾತನಾಡಿ ಶಿಕ್ಷಣ ಸಂಪನ್ಮೂಲ ಕೇಂದ್ರದ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಸುಳ್ಯದ ಹಿರಿಯ ಪತ್ರಕರ್ತ ಹಾಗೂ ಸುಳ್ಯದಲ್ಲಿ ನೂತನ ಪ್ರೆಸ್ ಕ್ಲಬ್ ಕಟ್ಟಡ ನಿರ್ಮಾಣದ ಯಶಸ್ವಿ ರೂವಾರಿ ಹರೀಶ್ ಬಂಟ್ವಾಳ್ ಹಾಗೂ ಶಾಲಾಭಿವೃದ್ದಿ ಸಮಿತಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಸಂಸ್ಥೆಯ ಬೆಳವಣಿಗೆಗೆ ಪಾತ್ರರಾಗಿ ಯಶಸ್ಸು ಕಂಡಿರುವ ಶಾಂತಿನಗರ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಮಹಮ್ಮದ್ ನಝೀರ್ ಹಾಗೂ ಗಾಂಧಿನಗರ ಕೆ ಪಿ ಎಸ್ ಇದರ ಉಪಾಧ್ಯಕ್ಷ ಚಿದಾನಂದ ಕುದ್ಪಾಜೆಯವರಿಗೆ ಗೌರವ ಸನ್ಮಾನ ಮಾಡಲಾಯಿತು.


ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷ ಹಾಗೂ ಜಿಲ್ಲಾ ಮಕ್ಕಳ ಮಾಸೋತ್ಸವ ಸಮಿತಿಯ ಸಹ ಸಂಚಾಲಕ ಹಸೈನಾರ್ ಜಯನಗರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ಪ್ರಧಾನ ಕಾರ್ಯದರ್ಶಿ ಮೋನಪ್ಪ ಕೊಳಗೆ ವಂದಿಸಿದರು.


ಕಾರ್ಯಕ್ರಮದಲ್ಲಿ ಅರಂತೋಡು ತೆಕ್ಕಿಲ್ ಶಾಲಾ ಸಮಿತಿ ಅಧ್ಯಕ್ಷ ಉನೈಸ್ ಪೆರಾಜೆ, ಸಮಾಜ ಸೇವಕ ಮಂಜುನಾಥ್ ಬಳ್ಳಾರಿ, ಪ್ರೆಸ್ ಕ್ಲಬ್ ಪ್ರ. ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೇಟಿ, ಉಪಾಧ್ಯಕ್ಷ ಜೆ.ಕೆ. ರೈ, ಕೋಶಾಧಿಕಾರಿ ರಮೇಶ್ ನೀರಬಿದಿರೆ, ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ, ದುರ್ಗಾ ಕುಮಾರ್ ನಾಯರ್‌ಕೆರೆ ಸೇರಿದಂತೆ ಪ್ರೆಸ್ ಕ್ಲಬ್‌ನ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು.

ಪ್ರೆಸ್ ಕ್ಲಬ್ ಸದಸ್ಯರುಗಳಾದ ಶರೀಫ್ ಜಟ್ಟಿಪಳ್ಳ, ಗಿರೀಶ್ ಅಡ್ಪಂಗಾಯ, ಶಿಕ್ಷಣ ಸಂಪನ್ಮೂಲ ಕೇಂದ್ರದ ತರಬೇತುದಾರ ನಾರಾಯಣ ಕಿಲಂಗೋಡಿ ಸಹಕರಿಸಿದರು.