ಮರ್ಕಂಜ: ಭಕ್ತಿ, ಸಂಭ್ರಮದಿಂದ ನಡೆದ ಅಯ್ಯಪ್ಪ ಸ್ವಾಮಿಯ ದೀಪೋತ್ಸವ

0

ಆರಿಕೋಡಿ ಧರ್ಮದರ್ಶಿಗಳ ಉಪಸ್ಥಿತಿಯಲ್ಲಿ ಗೌರವಾರ್ಪಣೆ

ಮರ್ಕಂಜ ಗ್ರಾಮದ ಪಟ್ಟೆ ರಾಮಚಂದ್ರ ಗುರುಸ್ವಾಮಿಯವರು ಅಯ್ಯಪ್ಪ ಸ್ವಾಮಿ ಭಕ್ತನಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಯಾತ್ರೆಯ 36 ವರ್ಷ ಪೂರ್ಣಗೊಳ್ಳುವ ಪ್ರಯುಕ್ತ ಅಯ್ಯಪ್ಪ ಸ್ವಾಮಿ ದೀಪೋತ್ಸವವು ಕಲ್ಲುಗುಂಡಿ ಜನಾರ್ಧನ ಗುರುಸ್ವಾಮಿ ನೇತೃತ್ವದಲ್ಲಿ ಡಿ.18 ರಂದು ಗೋಳಿಯಡ್ಕದ ವಠಾರದಲ್ಲಿ ನಡೆಯಿತು.
ಡಿ.18 ರಂದು ಬೆಳಿಗ್ಗೆ 6 ಕ್ಕೆ ಗಣಹೋಮದ ಬಳಿಕ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನ ಅಯ್ಯಪ್ಪ ಸ್ವಾಮಿಗೆ ಮಹಾಪೂಜೆ ಬಳಿಕ ಅನ್ನದಾನ ನಡೆಯಿತು.
ಸಂಜೆ ಕೇರಳ ಚೆಂಡೆ ವಾದನದೊಂದಿಗೆ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಿಂದ ಪಾಲ್‌ಕೊಂಬು ಮೆರವಣಿಗೆ ಹೊರಟು, ಗೋಳಿಯಡ್ಕವರೆಗೆ ಅಯ್ಯಪ್ಪ ಭಕ್ತರ ಪೇಟತುಳ್ಳ್‌ಪಾಟ್ ನಡೆಯಿತು. ರಾತ್ರಿ ಅಗ್ನಿಸ್ಪರ್ಶ ನಡೆದ ಬಳಿಕ ದೀಪಾರಾಧನೆ ನಡೆದು ಅಯ್ಯಪ್ಪ ಸ್ವಾಮಿಯ ಪೂಜೆ ನಡೆಯಿತು. ನಂತರ ನೆರೆದಿದ್ದ ಅಯ್ಯಪ್ಪ ವೃತಧಾರಿಗಳಿಂದ ಅಪ್ಪಸೇವೆ ನಡೆಯಿತು. ಬೆಳಿಗ್ಗೆ 4 ಗಂಟೆಗೆ ಅಯ್ಯಪ್ಪ ಭಕ್ತರಿಂದ ಅಗ್ನಿಸೇವೆ ನಡೆದು, ನಂತರ ಗುರುಪಾದ ವಂದನ ಮತ್ತು ಪೂಜಾ ಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆ ನಡೆಯಿತು.

ಸಭಾ ಕಾರ್ಯಕ್ರಮ ರದ್ದು
ರಾತ್ರಿ 7.30 ಕ್ಕೆ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಿಗದಿಯಾಗಿತ್ತಾದರೂ ಕೊನೆಯ ಕ್ಷಣದಲ್ಲಿ ಇಲಾಖೆಯ ಆದೇಶದಂತೆ ಸಭಾ ಕಾರ್ಯಕ್ರಮವನ್ನು ರದ್ದು ಮಾಡಲಾಯಿತು.


ಸಭಾ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದ ಆರಿಕೋಡಿಯ ಧರ್ಮದರ್ಶಿಗಳಾದ ಹರೀಶ್ ಅರಿಕೋಡಿ ಯವರು ಕಾರ್ಯಕ್ರಮಕ್ಕೆ ಬಂದು ಶುಭಹಾರೈಸಿದರು. ಗೋಳಿಯಡ್ಕ ಪೇಟೆಯಿಂದ ಪೂರ್ಣಕುಂಭ ಸ್ವಾಗತದ ಮೂಲಕ ಅವರನ್ನು ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ರಾಮಚಂದ್ರ ಗುರುಸ್ವಾಮಿ ಹಾಗೂ ಮನೆಯವರು ಧರ್ಮದರ್ಶಿಗಳಿಗೆ ಗೌರವಾರ್ಪಣೆ ಸಲ್ಲಿಸಿದರು.
ಪುತ್ತೂರು ನಗರ ಪ್ರಖಂಡ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಎಸ್.ದಾಮೋದರ ಪಾಟಾಳಿ, ಮರ್ಕಂಜ ಗ್ರಾ.ಪಂ. ಅಧ್ಯಕ್ಷೆ ಗೀತಾ ಹೊಸೋಳಿಕೆ, ಮರ್ಕಂಜ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೀಶ್ವರ ಸಿದ್ಧಮಠದ ಧರ್ಮದರ್ಶಿ ರಾಜೇಶ್‌ನಾಥ್ ಜೀ, ಸುಳ್ಯ ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ನಿವೃತ್ತ ಉಪತಹಶೀಲ್ದಾರ್ ಮಹಾಲಿಂಗ ದೇರೆಬೈಲು, ನಿವೃತ್ತ ಮುಖ್ಯೋಪಾಧ್ಯಾಯ ವಾಸು ಗೌಡ ಪಿ., ಸುಳ್ಯ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಪನ್ನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಗೌರವಾರ್ಪಣೆ
ಗುರುಂಪು ಡಿಲ್ಲಿಕುಮಾರ್‌ ಹಾಗೂ ಜಗದೀಶ್ ಆಚಾರ್ಯ ತುಂಬೆತ್ತಡ್ಕ, ಹಾಗೂ ಜನಾರ್ದನ ಗುರುಸ್ವಾಮಿ ಕಲ್ಲುಗುಂಡಿ ಯವರನ್ನು ಈ ಸಂದರ್ಭದಲ್ಲಿ ಗೌರವಿಸಿಲಾಯಿತು.

ಮರ್ಕಂಜ ಪಂಚಸ್ಥಾಪನೆಯ ಮಾಜಿ ಮೊಕ್ತೇಸರ ಯುವರಾಜ್ ಜೈನ್, ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರದ ಕುಂಞಿಕಣ್ಣನ್ ಕೋಮರ ಹಾಗೂ ಶಂಕರ ಕೋಮರ ಗೌರವ ಉಪಸ್ಥಿತರಿದ್ದರು.

ಮರ್ಕಂಜ ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪಧಾಧಿಕಾರಿಗಳು, ರಾಮಚಂದ್ರ ಗುರುಸ್ವಾಮಿಯವರ ಮನೆಯವರು, ಕುಟುಂಬದವರು ಹಾಗೂ ಊರಿನ ಗಣ್ಯರು ಮತ್ತು ಭಕ್ತಾಭಿಮಾನಿಗಳು ಉಪಸ್ಥಿತರಿದ್ದು, ಪ್ರಸಾದ ಸ್ವೀಕರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ
ರಾತ್ರಿ ಪಾಲ್ ಕೊಂಬು ಮೆರವಣಿಗೆಯ ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ರಾತ್ರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಳಿ ನಾಕೂರು ಗಯ ಹಾಗೂ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಭಸ್ಮಾಸುರ ಮೋಹಿನಿ ಹಾಗೂ ಶಬರಿಮಲೆ ಅಯ್ಯಪ್ಪ ಯಕ್ಷಗಾನ ಬಯಲಾಟ ನಡೆಯಿತು..