ಸುಳ್ಯ ತಾಲೂಕಿಗೆ ಕನಕಮಜಲಿನಲ್ಲಿ ಪುರಪ್ರವೇಶ ಮಾಡಿದ ಶ್ರೀ ಚೆನ್ನಕೇಶವ ದೇವರ ನೂತನ ಬ್ರಹ್ಮರಥ

0

ಶ್ರೀ ಆತ್ಮಾರಾಮ ಭಜನಾ ಮಂದಿರದ ಬಳಿ ಆರತಿ ಬೆಳಗಿ ಭವ್ಯ ಸ್ವಾಗತ

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ‌. ಚಿದಾನಂದ ಮತ್ತು ಮನೆಯವರಿಂದ ಸುಳ್ಯದ ಶ್ರೀ ಚೆನ್ನಕೇಶವ ದೇವರಿಗೆ ಸಮರ್ಪಣೆ ಮಾಡಲಿರುವ ನೂತನ ಬ್ರಹ್ಮರಥವು ಉಡುಪಿಯ ಕೋಟೇಶ್ವರದಿಂದ ಹೊರಟು ಕನಕಮಜಲಿಗೆ ಆಗಮಿಸುವ ಮೂಲಕ ಸುಳ್ಯ ತಾಲೂಕಿಗೆ ಪುರಪ್ರವೇಶ ಮಾಡಿದೆ.

ಕನಕಮಜಲಿನ ಶ್ರೀ ಆತ್ಮಾರಾಮ ದೇವರಿಗೆ ವಿಶೇಷ ಮಹಾ ಮಂಗಳಾರತಿ ನೆರವೇರಿಸಿ, ನೂತನ ಬ್ರಹ್ಮರಥಕ್ಕೆ ಆರತಿ ಬೆಳಗುವ ಮೂಲಕ ಬ್ರಹ್ಮರಥಕ್ಕೆ ಭವ್ಯ ಸ್ವಾಗತ ಕೋರಲಾಯಿತು.

ಕನಕಮಜಲಿನ ಮೂಲಕ ಸುಳ್ಯ ತಾಲೂಕಿಗೆ ಬ್ರಹ್ಮರಥ ಆಗಮಿಸುವ ಹಿನ್ನೆಲೆಯಲ್ಲಿ ಸುಳ್ಯದಿಂದ ಹಲವಾರು ಮಂದಿ ಭಕ್ತಾದಿಗಳು ಆಗಮಿಸಿ, ಸ್ವಾಗತ ಕೋರಿದರು.

ನೂತನ ಬ್ರಹ್ಮರಥಕ್ಕೆ ಕನಕಮಜಲು ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಶಾರದಾ ಉಗ್ಗಮೂಲೆ, ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ, ಕನಕಮಜಲು ಶ್ರೀ ಆತ್ಮಾರಾಮ ಭಜನಾ ಮಂದಿರದ ಅಧ್ಯಕ್ಷ ವಸಂತ ಮಳಿ, ಮಂದಿರದ ಅರ್ಚಕ ಗೋಪಾಲಕೃಷ್ಣ ಭಟ್ ವಾರಂಬಳಿತ್ತಾಯ
.ಅವರು ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು. ಬಳಿಕ ಭಕ್ತಾದಿಗಳು ಸೇರಿ ಬ್ರಹ್ಮರಥಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕನಕಮಜಲು ಗ್ರಾಮಸ್ಥರು ಮತ್ತು ಸುಳ್ಯ ತಾಲೂಕಿನ ಭಕ್ತಾದಿಗಳು ಉಪಸ್ಥಿತರಿದ್ದರು.
ಕನಕಮಜಲಿನ ಮೂಲಕ ಬ್ರಹ್ಮರಥ ಪುರಪ್ರವೇಶ ಮಾಡಲಿರುವ ಕಾರಣ ಶ್ರೀ ಆತ್ಮಾರಾಮ ಭಜನಾ ಮಂದಿರದ ವತಿಯಿಂದ ಕೇಸರಿ ಬಂಟಿಂಗ್ಸ್ ಹಾಗೂ ಭಗವಾದ್ವಜದ ಮೂಲಕ ಸಿಂಗರಿಸಲಾಗಿತ್ತು.