ಸರಕಾರಿ‌ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಸಿ.ಎಸ್.ಷಡಾಕ್ಷರಿ ಪುನರಾಯ್ಕೆ : ಸುಳ್ಯ ಶಾಖೆಯಿಂದ ಗೌರವ

0

ಕರ್ನಾಟಕ ರಾಜ್ಯ ಸರಕಾರಿ‌ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಸಿ.ಎಸ್. ಷಡಾಕ್ಷರಿಯವರು ಎರಡನೇ ಅವಧಿಗೆ ಆಯ್ಕೆಯಾಗಿದ್ದು, ಅವರನ್ನು ಸುಳ್ಯ ಶಾಖೆ ವತಿಯಿಂದ ಬೆಂಗಳೂರಿನಲ್ಲಿ ಗೌರವಿಸಲಾಯಿತು.

ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ನಿತಿನ್ ಪ್ರಭು, ರಾಜ್ಯ ಪರಿಷತ್ ಸದಸ್ಯ ಮಂಜು, ತಾಲೂಕು ಶಾಖೆ ಪ್ರಧಾನ ಕಾರ್ಯದರ್ಶಿ ಪೃಥ್ವಿ ಕುಮಾರ್ ಟಿ, ಕೋಶಾಧಿಕಾರಿ ಕುಶಾಲಪ್ಪ ತುಂಬತ್ತಾಜೆ, ನಿರ್ದೇಶಕ ಚಂದ್ರಶೇಖರ ಪಿ. ಇದ್ದರು.