ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಜ್ಞಾನದೀಪ ಎಲಿಮಲೆ  ಶಾಲೆಗೆ ಶೇಕಡ 100 ಫಲಿತಾಂಶ

0

 ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬೆಂಗಳೂರು ಇವರು ನವಂಬರ್ 2024ರಲ್ಲಿ ನಡೆಸಿದ ಚಿತ್ರಕಲಾ  ಹೈಯರ್ ಗ್ರೇಡ್ ಮತ್ತು ಲೋವರ್ ಗ್ರೇಡ್  ಪರೀಕ್ಷೆಗೆ ಒಟ್ಟು 18 ವಿದ್ಯಾರ್ಥಿಗಳು ಹಾಜರಾಗಿದ್ದರು.

ಲೋವರ್ ಗ್ರೇಡ್ ಪರೀಕ್ಷೆಗೆ ಒಟ್ಟು 12 ವಿದ್ಯಾರ್ಥಿಗಳು ಹಾಜರಾಗಿದ್ದು ಐದು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಮತ್ತು ಏಳು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

 ಹೈಯರ್ ಗ್ರೇಡ್  ನಲ್ಲಿ ಆರು ವಿದ್ಯಾರ್ಥಿಗಳಲ್ಲಿ ಐದು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ  ಮತ್ತು ಒಂದು ವಿದ್ಯಾರ್ಥಿಯು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಡಿಸ್ಟಿಂಕ್ಷನ್ ಪಡೆದ ಹಾಗೂ ಪ್ರಥಮ ದ್ವಿತೀಯ ಶ್ರೇಣಿಗಳಲ್ಲಿ ತೇರ್ಗಡೆ ಹೊಂದಿ ನೂರು ಶೇಕಡ ಫಲಿತಾಂಶ ತರಲು ಶ್ರಮಿಸಿದ ಚಿತ್ರಕಲಾ ಶಿಕ್ಷಕರಾದ ಪ್ರಸನ್ನ ಐವರ್ನಾಡು ಹಾಗೂ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದದವರು  ಅಭಿನಂದಿನಿಸಿದ್ದಾರೆ.