ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರ ನೇಮಕಾತಿ

0

ಅಪೂರ್ಣ ಅರ್ಜಿಗಳನ್ನು ಪೂರ್ಣಗೊಳಿಸಲು ಅವಕಾಶ

ಸುಳ್ಯ ಶಿಶು ಅಭಿವೃದ್ಧಿ ಸೇವಾ ಯೋಜನೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ 10 ಮತ್ತು 27 ಸಹಾಯಕಿಯರ ಗೌರವ ಸೇವೆ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ಸೆಪ್ಟಂಬರ್ 26ರ ವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು.

ಅರ್ಜಿ ಸಲ್ಲಿಸುವ ಕಾಲಾವಕಾಶ ಮುಗಿದಿದ್ದು ಅರ್ಜಿ ಸಲ್ಲಿಸುವಾಗ ವೆಬ್‌ಸೈಟ್ ನಲ್ಲಿ ಒಟ್ಟು 4 ವಿವಿಧ ಹಂತಗಳಿದ್ದು, ಇದರಲ್ಲಿ ಕೆಲವರಿಗೆ 1ನೇ ಹಂತದಲ್ಲಿಯೇ Application Successfully Uploaded ಎಂಬ ಮೆಸೇಜ್ ಮೊಬೈಲ್‌ಗೆ ಸ್ವೀಕೃತವಾಗಿರುವುದರಿಂದ ಅರ್ಜಿ ಅರ್ಜಿ ಪೂರ್ಣಗೊಳಿಸಿರುವುದಿಲ್ಲ. ಸಲ್ಲಿಸುವಾಗ 4 ಹಂತಗಳನ್ನೂ ಪೂರ್ಣಗೊಳಿಸದೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ದಿನಾಂಕ: 26.12.2024 ರಿಂದ ದಿ:05.01.2025 ರವರೆಗೆ ನೇಮಕಾತಿ ಪೊರ್ಟಲ್ ನಲ್ಲಿ ಇಲಾಖೆಯಿಂದ ಅವಕಾಶ ಕಲ್ಪಿಸಲಾಗಿದೆ.

ಅಪೂರ್ಣ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.