ಆಲೆಟ್ಟಿ ಸೊಸೈಟಿ ಜ.17 ರಂದು ಚುನಾವಣೆ

0

ಇಂದು 11 ಮಂದಿಯಿಂದ ನಾಮಪತ್ರ – ಒಟ್ಟು 25 ಮಂದಿ ನಾಮಪತ್ರ ಸಲ್ಲಿಕೆ

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಜ.17 ರಂದು ಚುನಾವಣೆ ನಡೆಯಲಿದ್ದು ಇಂದು 11 ಮಂದಿ ನಾಮಪತ್ರ ಸಲ್ಲಿಕೆ ಮಾಡಿರುತ್ತಾರೆ.
ಸಾಮಾನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮುತ್ತಪ್ಪ ಪೂಜಾರಿ ಎಂ, ಚಂದ್ರಕಾಂತ ನಾರ್ಕೋಡು, ನಾರಾಯಣ ರೈ ಎಂ, ಸತ್ಯಕುಮಾರ್ ಬಿ.ಕೆ ಆಡಿಂಜ, ಲೋಲಜಾಕ್ಷ ಬಿ.ಸಿ ಭೂತಕಲ್ಲು, ಪ.ಪಂಗಡ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹರಿಪ್ರಸಾದ್ ಕೆ.ಎಸ್ ಗಬ್ಬಲ್ಕಜೆ, ಪ.ಜಾತಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೊರಗಪ್ಪ ಎಂ, ಮಹಿಳಾ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೀತಾ ಕೋಲ್ಚಾರು, ಮೀನಾಕ್ಷಿ ಅರಂಬೂರು, ಹಿಂದುಳಿದ ವರ್ಗ ಎ.ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಧಾಕೃಷ್ಣ ಪರಿವಾರಕಾನ, ಹಿಂದುಳಿದ ವರ್ಗ ಬಿ ಯಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಧರ್ಮಪಾಲ ಕೊಯಿಂಗಾಜೆ ಯವರು ನಾಮಪತ್ರ ಸಲ್ಲಿಸಿರುತ್ತಾರೆ.

ಜ.9 ರ ತನಕ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು ಈಗಾಗಲೇ ಒಟ್ಟು 25 ಮಂದಿ ನಾಮಪತ್ರ ಸಲ್ಲಿಸಿದಂತಾಗಿದೆ.