ಮಡಪ್ಪಾಡಿ ಸೊಸೈಟಿಗೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ

0

ನೂತನ ಅಧ್ಯಕ್ಷರಾಗಿ ವಿನಯಕುಮಾರ್ ಮತ್ತು ಉಪಾಧ್ಯಕ್ಷರಾಗಿ ಸಚಿನ್ ಬಳ್ಳಡ್ಕ ಆಯ್ಕೆ

ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆ ನಡೆದಿದ್ದು, ಇಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.

ನೂತನ ಅಧ್ಯಕ್ಷರಾಗಿ ವಿನಯ ಕುಮಾರ್ ಮುಳುಗಚಿಜu ಮತ್ತು ಉಪಾಧ್ಯಕ್ಷರಾಗಿ ಸಚಿನ್ ಬಳ್ಳಡ್ಕ ಆಯ್ಕೆಯಾದರು.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ನಾನಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಕಡೆಯಿಂದ ನಾಮಪತ್ರ ಸಲ್ಲಿಕೆಯಾಯಿತು. ಹೀಗಾಗಿ ಚುನಾವಣಾ ಪ್ರಕ್ರಿಯೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ವಿನಯ ಕುಮಾರ್ ಮುಳುಗಾಡು ನಾಮಪತ್ರ ಸಲ್ಲಿಸಿದ್ದರು. ಇವರನ್ನು ಕರುಣಾಕರ ಪಾರೆಪ್ಪಾಡಿ ಸೂಚಿಸಿ, ಆನಂದ ಶೆಟ್ಟಿಮಜಲು ಅನುಮೋದಿಸಿದರು.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮಿತ್ರದೇವ ಮಡಪ್ಪಾಡಿಯವರು ನಾಮಪತ್ರ ಸಲ್ಲಿಸಿದ್ದರು.


ಇವರನ್ನು ಪಿ.ಸಿ.ಜಯರಾಮ ಸೂಚಿಸಿ, ಪ್ರವೀಣ ಯತೀಂದ್ರನಾಥ ಅನುಮೋದಿಸಿದ್ದರು.
ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಜೆ.ಪಿ. ಬೆಂಬಲಿತ ಅಭ್ಯರ್ಥಿಯಾಗಿ ಸಚಿನ್ ಬಳ್ಳಡ್ಕ ನಾಮಪತ್ರ ಸಲ್ಲಿಸಿದ್ದರು . ಇವರನ್ನು ಶಕುಂತಲಾ ಕೇವಳ ಸೂಚಿಸಿ, ಪ್ರದೀಪ್ ಪನಿಯಾಲ ಅನುಮೋದಿಸಿದರು.


ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸೋಮಶೇಖರ ಕೇವಳ ನಾಮಪತ್ರ ಸಲ್ಲಿಸಿದ್ದರು.
ಇವರನ್ನು ಚಂದ್ರಶೇಖರ ಗುಡ್ಡೆ ಸೂಚಿಸಿ, ಮಿತ್ರದೇವ ಮಡಪ್ಪಾಡಿ ಅನುಮೋದಿಸಿದ್ದರು.

ನಿರ್ದೇಶಕರುಗಳಾದ ಜಯರಾಮ ಪಿ.ಸಿ., ಚಂದ್ರಶೇಖರ ಗುಡ್ಡೆ, ಕರುಣಾಕರ ಪಾರೆಪ್ಪಾಡಿ, ಪ್ರದೀಪ್‌ಕುಮಾರ್ ಪಿ.ಬಿ., ಆನಂದ ಎಸ್., ಪ್ರವೀಣ ಯತೀಂದ್ರನಾಥ ಪಾಲ್ತಾಡು, ಶಕುಂತಲಾ ಕೇವಳ, ಶಿವರಾಮ ಚಿರೆಕಲ್ಲು, ಡಿ.ಸಿ.ಸಿ. ಬ್ಯಾಂಕ್ ಜಿಲ್ಲಾ ಪ್ರತಿನಿಧಿ ಮನೋಜ್ ಕುಮಾರ್ ಉಪಸ್ಥಿತರಿದ್ದರು.

ಚುನಾವಣಾಧಿಕಾರಿ ಬಿ.ನಾಗೇಂದ್ರ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಪೂಂಬಾಡಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.