ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳ್ಳಾರೆ ವಲಯ, ಐವರ್ನಾಡು, ಪಾಲೆಪ್ಪಾಡಿ ,ದೇವರಕಾನ ಒಕ್ಕೂಟದ ಮತ್ತು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಐವರ್ನಾಡು ವತಿಯಿಂದ 17ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಸಂಘಗಳಿಗೆ ಲಾಭಾಂಶ ವಿತರಣಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯು ಜ.13 ರಂದು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಅರ್ಚಕರು ಪೂಜಾ ಕಾರ್ಯ ನೆರವೇರಿಸಿದರು.
ಫೆ.02 ರಂದು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸಭಾಭವನದಲ್ಲಿ 17ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಸಂಘಗಳಿಗೆ ಲಾಭಾಂಶ ವಿತರಣೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಇದರ ಅಧ್ಯಕ್ಷತೆಯನ್ನು ಎಸ್.ಎನ್ ಮನ್ಮಥ ರವರು ವಹಿಸಲಿದ್ದಾರೆ. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನವನ್ನು ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಶ್ರೀ ಕ್ಷೇತ್ರ ಮಾಣಿಲಾ ಇವರು ನೀಡಲಿದ್ದಾರೆ.
ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ನೂತನ ಅಧ್ಯಕ್ಷರಾದ ರಾಜೇಶ್ ಭಟ್ ಬಾಂಜಿ ಕೋಡಿ ಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯರು, ಪೂಜಾ ಸಮಿತಿಯ ಅಧ್ಯಕ್ಷರು ಎಸ್. ಎನ್ ಮನ್ಮಥ, ಮತ್ತು ಪದಾಧಿಕಾರಿಗಳು, ದಿನೇಶ್ ಮಡ್ತಿಲ. ರವಿನಾಥ ಮಡ್ತಿಲ, ಜೆ.ಟಿ ವೆಂಕಪ್ಪ ಗೌಡ ,ಜಯಂತ್ ,ಮಹೇಶ್ ಜಬಳೆ, ಸತೀಶ್ ಎಡಮಲೆ, ಮಧುಕರ ನಿಡುಬೆ,ನಟರಾಜ್, ದಾಮೋದರ ನಿಸರ್ಗ, ಸಮಿತಿಯ ಕಾರ್ಯಕಾರಿ ಸದಸ್ಯರಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸುಳ್ಯ ತಾಲೂಕಿನ ಯೋಜನಾಧಿಕಾರಿಯದ ಮಾಧವ ಗೌಡ, ವಲಯ ಅಧ್ಯಕ್ಷರಾದ ವೇದ ಹೆಚ್ ಶೆಟ್ಟಿ ,ವಲಯ ಮೇಲ್ವಿಚಾರಕರಾದ ಶ್ರೀಮತಿ ವಿಶಾಲ ಐವರ್ನಾಡು ಒಕ್ಕೂಟದ ಪದಾಧಿಕಾರಿಗಳು ಹಾಗೂ ಬೆಳ್ಳಾರ ವಲಯದ ಸೇವಾ ಪ್ರತಿನಿಧಿಗಳು ಅಶ್ವಿನಿ, ಗೀತಾ, ಹರಿಣಿ, ದಿವ್ಯ ಸ್ಥಳೀಯ ಸೇವಾ ಪ್ರತಿನಿಧಿಯಾದ ಶ್ರೀಮತಿ ರಶ್ಮಿತ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.