ಜ.26 ರಿಂದ ಅನ್ಸಾರ್ ವತಿಯಿಂದ ಮೂರು ದಿನಗಳ ಧಾರ್ಮಿಕ ಮತಪ್ರವಚನ ಕಾರ್ಯಕ್ರಮ-ಆಮಂತ್ರಣ ಪತ್ರಿಕೆ ಬಿಡುಗಡೆ

0

ಅನ್ಸಾರುಲ್ ಮುಸ್ಲಿಂಮೀನ್ ಅಸೋಸಿಯೇಷನ್ ಇದರ ವತಿಯಿಂದ 3 ದಿನಗಳ ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮಜ.26’27’28 ರಂದು ಗಾಂಧಿನಗರ ಮುನವಿರುಲ್ ಇಸ್ಲಾಂ ಮದ್ರಸ ವಠಾರದಲ್ಲಿ ನಡೆಯಲಿದೆ. ಜನವರಿ 26 ರಂದು ಧಾರ್ಮಿಕ ಮತ ಪ್ರಭಾಷಣ ಅಸ್ಸಯ್ಯದ್ ಅಬ್ದುರ್ರಹ್ಮಾನ್ ಮಶ್‌ಹೂದ್, ಅಲ್ ಬುಖಾರಿ ತಂಜಳ್ ಕೂರ ಉದ್ಘಾಟಸಿ ದುವಾಶಿರ್ವಚನ ಮಾಡಲಿದ್ದಾರೆ.


ಉದ್ಘಾಟನ ಸಮಾರಂಭದಲ್ಲಿ ಯಾಸಿ‌ರ್ ಸಖಾಫಿ ಅಲ್ ಅಝ್ಹರಿ ಉಅ್ ಕೂರ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಜನವರಿ 27 ರಂದು ನಡೆಯುವ ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮದಲ್ಲಿ ಅಸ್ಸಯ್ಯದ್ ತ್ವಾಹಿರ್ ಸಅದಿ ಬಾಅಲವಿ ತಂಬಳ್ ದುವಾ ಮಾಡಲಿದ್ದಾರೆ ಮುಖ್ಯ ಪ್ರಭಾಷಣವನ್ನು ಅನ್ವರ್ ಅಲಿ ಹುದವಿ ಮಲಪ್ಪುರಂ ಮಾಡಲಿದ್ದಾರೆ.

ಜನವರಿ 28ರಂದು ನಡೆಯುವ ಧಾರ್ಮಿಕ ಮತ ಪ್ರಭಾಷಣ ಸಮಾರೋಪ ಸಮಾರಂಭದಲ್ಲಿ ಅಸ್ಸಯ್ಯದ್ ಕುಂಙಿಕೋಯ ಸಅದಿ ಬಾಅಲವಿ ತಂಜಳ್‌ ಸುಳ್ಯ ದುವಾಶಿರ್ವಚನ ನೀಡಲಿದ್ದಾರೆ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಅಬ್ದುರಹ್ಮಾನ್ ಸಖಾಫಿ ಯವರು ಮಾಡಲಿದ್ದಾರೆ ಎಂದು ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಪದಾಧಿಕಾರಿಗಳು ತಿಳಿಸಿದ್ದಾರೆ.

ಅನ್ಸಾರ್ ಕಾರ್ಯಕ್ರಮದ ಅಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಅನ್ಸಾರ್ ಕಛೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.