ಐವರ್ನಾಡು ಗ್ರಾಮದ ಮಡ್ತಿಲ ಕುಟುಂಬದ ಮೂಲ ನಾಗನ ಕಟ್ಟೆಯು ಜೀರ್ಣೋದ್ಧಾರಗೊಂಡು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಾಗ ಪ್ರತಿಷ್ಠಾ ಕಲಶೋತ್ಸವವು ಜ.19 ರಂದು ನಡೆಯಿತು. ಜ.18 ರಂದು ಸಂಜೆ ದೇವತಾ ಪ್ರಾರ್ಥನೆ,ಆಚಾರ್ಯವರಣೆ,ಸ್ವಸ್ತಿ ಪುಣ್ಯಾಹ ವಾಚನ,ಸ್ಥಳ ಶುದ್ಧಿ ,ಪ್ರಸಾದ ಶುದ್ಧಿ,ರಕ್ಷೋಘ್ನ ಹೋಮ,ವಾಸ್ತು ಹೋಮ,ವಾಸ್ತು ಪೂಜಾಬಲಿ,ಪ್ರಕಾರ ದಿಕ್ಬಲಿ,ಪ್ರಸಾದ ವಿತರಣೆ ನಡೆಯಿತು.
ಜ.19 ರಂದು ಬೆಳಿಗ್ಗೆ ಮಹಾಗಣಪತಿ ಹೋಮ,ಪ್ರತಿಷ್ಠಾ ಹೋಮ,ಪಂಚವಿಂಶತಿ ಕಲಶ ಪೂಜೆ, ಬಳಿಕ ನಾಗಪ್ರತಿಷ್ಠೆ , ಆಶ್ಲೇಷ ಬಲಿ, ದೇವರಿಗೆ ಪಂಚಾಮೃತ ಅಭಿಷೇಕ ಪಂಚವಿಂಶನಿ ಸಾನಿಧ್ಯ ಕಲಶಾಭಿಷೇಕ, ತಂಬಿಲ ಸೇವೆ,ಮಂಗಳಾರತಿ, ಪ್ರಸಾದ ವಿತರಣೆ , ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಆಡಳಿತದಾರರು ಮತ್ತು ಕುಟುಂಬಸ್ಥರಾದ ಬೆಳ್ಯಪ್ಪ ಗೌಡ ಮಡ್ತಿಲ,ಕಾರ್ಯನಿರ್ವಾಹಕರುಗಳಾದ ಶ್ರೀನಿವಾಸ ಮಡ್ತಿಲ,ಬೆಳ್ಯಪ್ಪ ಗೌಡ ಎಂ.ಎಸ್, ರವಿನಾಥ ಗೌಡ ಎಂ.ಎಸ್. ಹಾಗೂ ಕುಟುಂಬಸ್ಥರು ,ಭಕ್ತಾದಿಗಳು ಉಪಸ್ಥಿತರಿದ್ದರು.