ನಿವೃತ್ತ ಎಪಿಪಿ ಶಿವಾನಂದ ಮುಂಡೋಡಿ ಹೃದಯಘಾತದಿಂದ ನಿಧನ

0

ಮಂಗಳೂರಿನ ನ್ಯಾಯಾಲಯದಲ್ಲಿ ಎಪಿಪಿ ಆಗಿ ನಿವೃತ್ತಿ ಹೊಂದಿದ ಶಿವಾನಂದ ಮುಂಡೋಡಿಯವರು ಹೃದಯಾಘಾತದಿಂದ ಜ. 19 ರಾತ್ರಿ ನಿಧನ ಹೊಂದಿದರು.

ಅವರಿಗೆ ಸುಮಾರು 75 ವರ್ಷ ವಯಸ್ಸಾಗಿತ್ತು.

ಸುಳ್ಯ ಗಾಂಧಿನಗರದ ಅರಣ್ಯ ಇಲಾಖೆಯ ಸಮೀಪ ಮನೆಯಲ್ಲಿ ವಾಸವಿದ್ದ ಅವರು ಪತ್ನಿ ಶ್ರೀಮತಿ ಶಾಂತಿ, ಮೂವರು ಹೆಣ್ಣು ಮಕ್ಕಳನ್ನು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.