ಗುತ್ತಿಗಾರು ಸರಣಿ ಕಳ್ಳತನ- ಬಂಧನ-ನ್ಯಾಯಾಂಗ ಕಸ್ಟಡಿ

0

ಮನೆಯವರಿಂದ ಕಳ್ಳತನದ ಆರೋಪ ನಿರಾಕರಣೆ

ಗುತ್ತಿಗಾರು ಪೇಟೆಯಲ್ಲಿ ಸರಣಿ ಕಳ್ಳತನ ನಡೆಸಿರುವ ಆರೋಪದಡಿ ಸುಬ್ರಹ್ಮಣ್ಯ ಪೊಲೀಸರು ಕೊಲ್ಲಮೊಗ್ರ ಗ್ರಾಮದ ಕರುಣಾಕರ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.ಆತನಿಗೆ ನ್ಯಾಯಾಂಗ ಬಂಧನಕ್ಕೆ ಆದೇಶವಾಗಿರುವುದಾಗಿ ತಿಳಿದು ಬಂದಿದೆ. ಕರುಣಾಕರ ಎಂಬವರ ಮನೆಯವರು ಆರೋಪ ನಿರಾಕರಿದ್ದಾರೆ.

ಜ. 13ರ ತಡರಾತ್ರಿ ಗುತ್ತಿಗಾರಿನ ಮುತ್ತಪ್ಪ ತಿರುವಪ್ಪ ದೈವಸ್ಥಾನದಿಂದ ಹುಂಡಿ, ಒಂದು ಹೊಟೇಲ್, ಹಸಿ ಮೀನಿನ ಅಂಗಡಿಯಿಂದ ನಗದು ಕಳ್ಳತನವಾಗಿತ್ತು.
ಸಿ.ಸಿ ಟಿವಿ ಪೊಟೇಜ್ ಜಾಲಾಡಿದ ಪೊಲೀಸರು ಕೊಲ್ಲಮೊಗ್ರದ ಕರುಣಾಕರ ಅವರನ್ನು ಜ.21 ರಂದು ಬಂಧಿಸಿ ವಿಚಾರಿಸಿದ್ದು ಕಳ್ಳ ತನ್ನ ಕೃತ್ಯ ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ. ಅಂದೇ ಸ್ಥಳ ಮಹಜರು ನಡೆಸಿ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರು ಪಡಿಸಲಾಗಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿದಿಸಿರುವುದಾಗಿ ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಕರುಣಾಕರ ಮನೆಯವರು ಆರೋಪ ನಿರಾಕರಿಸಿದ್ದಾರೆ.ಆತ ಕಳ್ಳತನವಾದ ದಿನ ಮನೆಯಲ್ಲಿಯೇ ಇದ್ದರು. ಪೋಲೀಸರು ಆತನ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.