ಸುಳ್ಯ ಭೂ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಗೆ 7 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 5 ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿದ್ದು ಉಳಿದ ಎರಡರಲ್ಲಿ ಒಂದು ಸ್ಥಾನ ಕಾಂಗ್ರೆಸ್ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿ ಒಬ್ಬರು ಗೆಲುವು ಸಾಧಿಸಿದ್ದು ಮತ್ತೆ ಬಿಜೆಪಿ ಆಡಳಿತದ ಅಧಿಕಾರವನ್ನು ಪಡೆದುಕೊಂಡಿದ್ದು ಇಂದು ಅದ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಸಂಘದ ಸಭಾಭವನದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಜಯರಾಮ ರೈ ಜಾಲ್ಸೂರು ,ಉಪಾಧ್ಯಕ್ಷ ರಾಗಿ ಅವಿನಾಶ್ ಡಿ.ಕೆ, ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ರವರನ್ನು ಆಯ್ಕೆ ಮಾಡಲಾಯಿತು.
ನಿರ್ದೇಶಕರಾಗಿ ಭಾಗೀರಥಿ ಮುರುಳ್ಯ, ವಿಶಾಲಾಕ್ಷಿ ಬೆಳ್ಳಾರೆ,ಸವಿತಾ ಕೆ.ಜೆ ಕೊಲ್ಲಮೊಗ್ರ, ರಮೇಶ್ ಪಿ ಮಡಪ್ಪಾಡಿ, ಈಶ್ವರಚಂದ್ರ ಕಳಂಜ, ಮಹಾವೀರ ಜಿ, ಜ್ಞಾನೇಶ್ವರ ಶೇಟ್,ಧರ್ಮಪಾಲ ಕೊಯಿಂಗಾಜೆ, ಗಣಪಯ್ಯ ಪಿ,
ಕಾವೇರಿ ಕೆ ಯವರು ಆಯ್ಕೆಗೊಂಡರು.
ಅದ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಶಿವಲಿಂಗಯ್ಯ ರವರು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ
ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ,ಬ್ಯಾಂಕಿನ ಮಾಜಿ ಅಧ್ಯಕ್ಷ ಉಮೇಶ್ ಪಿ.ಕೆ., ಮಾಜಿ ಉಪಾಧ್ಯಕ್ಷ ಸೋಮನಾಥ ಪೂಜಾರಿ,
ಮಾಜಿ ನಿರ್ದೇಶಕಿ ಶ್ರೀಮತಿ ಸುವರ್ಣಿನಿ, ಪ್ರಮುಖರಾದ ವಿನಯ್ ಕುಮಾರ್ ಕಂದಡ್ಕ, ಶ್ರೀಪತಿ ಭಟ್ ಮಜಿಗುಂಡಿ,
ಎ.ಟಿ ಕುಸುಮಾಧರ, ಸಿ.ಎ.ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಅಡ್ಪಂಗಾಯ, ಕನಕಮಜಲು ಸೊಸೈಟಿ ಅಧ್ಯಕ್ಷ ಸುಧಾಕರ ಕಾಮತ್,
ನಾರಾಯಣ ಶಾಂತಿನಗರ,ಮಾಧವ ಜಾಲ್ಸೂರು ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರು ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.