ಎಲಿಮಲೆ : ದೇವಚಳ್ಳ ಶಾಲಾ ಶತಮಾನೋತ್ಸವದ ಅದ್ದೂರಿ ಮೆರವಣಿಗೆ

0

ಕೋಲಾಟ, ಹುಲಿ ವೇಷ ಕುಣಿತ, ವಿದ್ಯಾರ್ಥಿಗಳ ಸಾಲು, ಚೆಂಡೆಯ ಸಾಥ್

ನೂತನ ಕಾಮಗಾರಿಗಳ ಉದ್ಘಾಟನೆ

ಎಲಿಮಲೆ ಯಲ್ಲಿರುವ ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ದೊರೆಯಿತು.

ಎಲಿಮಲೆ ಸಮೀಪ ಎತ್ತಿನಹೊಳೆ ಬಳಿಯಿಂದ ಎಲಿಮಲೆ ಶಾಲೆಯ ತನಕ ಆಕರ್ಷಕ ಮೆರವಣಿಗೆ ನಡೆಯಿತು. ಪೂರ್ಣಕುಂಭ, ವಾದ್ಯ ಮೇಳಗಳು, ಚೆಂಡೆ, ಸಿಂಗಾರಿಮೇಳ, ಹುಲಿವೇಷ ಮೆರವಣಿಗೆಗೆ ಮೆರುಗು ನೀಡಿತು. ಉದ್ಯಮಿ ಜೋಸೆಫ್ ಕುರಿಯನ್ ಮೆರವಣಿಗೆಗೆ ಚಾಲನೆ ನೀಡಿದರು. ನೂತನ ದ್ವಾರ ಮತ್ತು ಉದ್ಯಾನವನವನ್ನು ಉದ್ಘಾಟಿಸಲಾಯಿತು.

ಉದ್ಘಾಟನೆಯನ್ನು ನಿವೃತ್ತ ಎಎಸ್ಐ ಕೃಷ್ಣಯ್ಯ ಕಾಣಿಕೆ, ಶಿವಾಜಿ ಫ್ರೆ‌ಂಡ್ಸ್ ಕ್ಲಬ್‌ನ ಅಧ್ಯಕ್ಷ ವಿನಯಕುಮಾರ ಕಲ್ಲುಪಣೆ, ನಿವೃತ್ತ ಬ್ಯಾಂಕ್ ಅಧಿಕಾರಿ ರಮೇಶ್ ಮೂರ್ತಿ ಕೇರ, ಉದ್ಮಮಿ ಸೀತಾರಾಮ ಹಲ್ದಡ್ಕ,ರಾಧಾಕೃಷ್ಣ ಮೈರುಪಳ್ಳ ಉದ್ಘಾಟನೆ ನೆರವೇರಿಸಿದರು.


ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಎ.ವಿ. ತೀರ್ಥರಾಮ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಜಯಾನಂದ ಪಟ್ಟೆ ಶಾಲಾ ಮುಖೋಪಾಧ್ಯಾಯ ಶ್ರೀಧರ್ ಗೌಡ ಕೆ, ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗೋಪಿನಾಥ ಮೆತಡ್ಕ, ಖಜಾಂಜಿ ಕೆ.ಆರ್.ರಾಧಾಕೃಷ್ಣ ಮಾವಿನಕಟ್ಟೆ,ಡಿ.ಟಿ.ದಯಾದ,
ಕಾರ್ಯದರ್ಶಿ ಜಯಂತ ತಳೂರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಪ್ರಸಾದ್ ಬಿ.ವಿ., ಕಾರ್ಯದರ್ಶಿ ರಾಜಗೋಪಾಲ, ಶತಮಾನೋತ್ಸವ ಸಮಿತಿ ಹಾಗೂ ಎಸ್‌ಡಿಎಂಸಿ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.