⬆️ ಫೆ.1: ರಾತ್ರಿ ಧ್ವಜಾರೋಹಣ
⬆️ ಫೆ.3:ಹಸಿರು ಕಾಣಿಕೆ ಸಮರ್ಪಣೆ
⬆️ ಫೆ.5 :ಹಗಲು ದರ್ಶನ ಬಲಿ,ಫೆ.6.:ರಾತ್ರಿ ಬ್ರಹ್ಮರಥೋತ್ಸವ
ಪಂಜ ಸೀಮೆ ದೇವಾಲಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ವರ್ಷಾವಧಿ ಜಾತ್ರೋತ್ಸವ ಜ.24 ರಿಂದ ಫೆ.9 ರ ತನಕ ನಡೆಯಲಿದೆ.
ಜ.24.ರಂದು ಗೊನೆ ಕಡಿಯುವ ಕಾರ್ಯಕ್ರಮ ವಿವಿಧ ವೈದಿಕ, ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಿತು.
ಮುಂಜಾನೆ ದೇವಳದಲ್ಲಿ ಪ್ರಾರ್ಥನೆ ನಡೆದು ಕುದ್ವ ತೋಟದಲ್ಲಿ ಗೊನೆ ಕಡಿದು ಪೂರ್ವ ಸಂಪ್ರದಾಯದಂತೆ ಬ್ಯಾಂಡ್ ವಾಲಗ ಮೆರವಣಿಗೆ ಮೂಲಕ ಶ್ರೀ ದೇವಾಲಯಕ್ಕೆ ಸಮರ್ಪಿಸಲಾಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಗೌರವ ಸಲಹೆಗಾರ ಆನಂದ ಗೌಡ ಕಂಬಳ, ವ್ಯವಸ್ಥಾಪನಾ ಸಮಿತಿ ಪೂರ್ವಾಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲು ಗುತ್ತು, ವ್ಯವಸ್ಥಾಪನಾ ಸದಸ್ಯರಾದ ಧರ್ಮಪಾಲ ಗೌಡ ಮರಕ್ಕಡ ಕಾಚಿಲ,ಮಾಯಿಲಪ್ಪ ಗೌಡ ಎಣ್ಮೂರು,ಶ್ರೀಮತಿ ಪವಿತ್ರ ಮಲ್ಲೆಟ್ಟಿ , ಶ್ರೀಮತಿ ಮಾಲಿನಿ ಕುದ್ವ , ಸಂತೋಷ್ ರೈ ಬಳ್ಪ, ಧರ್ಮಣ್ಣ ನಾಯ್ಕ ಗರಡಿ, ರಾಮಚಂದ್ರ ಭಟ್ ಉತ್ಸವ ಸಮಿತಿಯ ಸಂಚಾಲಕರು , ಸದಸ್ಯರು, ಸೀಮೆಯ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಫೆ.1. ರಂದು ರಾತ್ರಿ ಧ್ವಜಾರೋಹಣ ನಡೆಯಲಿದೆ. ಫೆ.2 ರಂದು ಬಂಟಮಲೆಯಿಂದ ಶ್ರೀ ದೇವಾಲಯಕ್ಕೆ ತೀರ್ಥ ತರುವುದು. ಫೆ.3 ರಂದು ಹಸಿರು ಕಾಣಿಕೆ ಸಮರ್ಪಣೆ. ದಂಡಮಾಲೆ ಹಾಕಿ ಬಲಿ ಹೊರಡುವುದು.
ಫೆ.5 ರಂದು ಹಗಲು ಶ್ರೀ ದೇವರ ದರ್ಶನ ಬಲಿ,ಫೆ.6.ರಂದು ರಾತ್ರಿ ಶ್ರೀದೇವರ ಬ್ರಹ್ಮ ರಥೋತ್ಸವ ಜರುಗಲಿದೆ.
ಫೆ.7ರಂದು ಮುಂಜಾನೆ ಅವಭೃತ ಸ್ನಾನ, ರಾತ್ರಿ ಕಾಚುಕುಜುಂಬ ದೈವದ ನೇಮ,.ಫೆ.8 ರಂದು ಮುಂಜಾನೆ ಶ್ರೀ ಉಳ್ಳಾಕುಲು ದೈವದ ನೇಮ ಜರುಗಲಿದೆ.ಫೆ.9 ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪೂಜೆ ಹಾಗೂ ಶಿರಾಡಿ ದೈವದ ನೇಮ ಜರುಗಲಿದೆ.