ಆಲೆಟ್ಟಿ ಶ್ರೀ ಸದಾಶಿವ ಕ್ಷೇತ್ರದ ಗುಂಡ್ಯ ಮಾಡಾರಮನೆ ಸಪರಿವಾರ ಶ್ರೀ ಉಳ್ಳಾಕುಲು ದೈವಸ್ಥಾನದಲ್ಲಿ ಶ್ರೀ ದೈವಗಳ ಧರ್ಮನಡಾವಳಿ ನೇಮೋತ್ಸವವು
ಫೆ.3 ಮತ್ತು 4 ರಂದು ನಡೆಯಲಿರುವುದು.
ಫೆ.1 ರಂದು ಸಂಜೆ ಆಲೆಟ್ಟಿ ಶ್ರೀ ಸದಾಶಿವ ಭಜನಾ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಫೆ.2 ರಂದು ಚಾವಡಿಯಲ್ಲಿ
ಪುನರ್ ಪ್ರತಿಷ್ಠಾ ಮಹೋತ್ಸವವು ನಡೆಯಲಿದೆ.
ಫೆ.3 ರಂದು ಸಂಜೆ ಮೊರಂಗಲ್ಲು ಉಳ್ಳಾಕುಲು ಚಾವಡಿಯಿಂದ ಶ್ರೀ ದೈವದ ಭಂಡಾರ ಆಗಮಿಸಿ ವಾಲಸಿರಿಯಾಗಿ ಉಳ್ಳಾಕುಲು ದೈವದ ಕಿರಿಯರ ನೇಮ ಮತ್ತು ಹಿರಿಯರ ನೇಮವಾಗಿ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆಯಾಗಲಿರುವುದು.
ಫೆ.4 ರಂದು ಪೂರ್ವಾಹ್ನ ಸಪರಿವಾರ ದೈವಗಳ ನೇಮೋತ್ಸವ, ಶ್ರೀ ಮಲೆ ಚಾಮುಂಡಿ ದೈವದ ನೇಮ, ಶ್ರೀ ಪುರುಷ ದೈವ,ಮದಿಮಾಳ್ ,ಅಜ್ಜಿ , ಪೊಟ್ಟನ್ ದೈವ, ಪಂಜುರ್ಲಿ ದೈವ, ಕೂಜಿ ದೈವಗಳನೇಮೋತ್ಸವವಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಗಲಿರುವುದು ಎಂದು ದೈವಸ್ಥಾನದ ಅಧ್ಯಕ್ಷ ಅಶೋಕ ಪ್ರಭು ತಿಳಿಸಿದರು.