ಹುಳಿಯಡ್ಕ ಶ್ರೀ ವೀರಭದ್ರ ದೇವರ ಬ್ರಹ್ಮಕಲಶ

0

ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಮಾಚಿದೇವ ಜಯಂತಿ

ಉಬರಡ್ಕದ ಶ್ರೀ ವೀರಭದ್ರ ದೇವರ ಭಂಡಾರದ ಮನೆಯ ಗೃಹಪ್ರವೇಶ ಮತ್ತು ಶ್ರೀ ದೇವರ ಪ್ರತಿಷ್ಟ್ಠ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಹಸಿರುವಾಣಿ ಹಾಗೂ ವಿವಿಧ ವೈಧಿಕ ಕಾರ್ಯಕ್ರಮಗಳು ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಮಾಚಿದೇವ ಜಯಂತಿ ಆಚರಣೆ ಫೆ.2 ರಂದು ಸಂಜೆ ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಸುಳ್ಯ ತಾಲೂಕು ಮಡಿವಾಳ ಸಂಘದ ಅಧ್ಯಕ್ಷರಾದ ಲೋಕೇಶ್ ಏನೆಕಲ್ಲು ವಹಿಸಿದ್ದರು.

ಉಬರಡ್ಕದ ಶ್ರೀ ನರಸಿಂಹ ದೇವಸ್ಥಾನದ ವ್ಯವಸ್ಥಾಪನ ಸಮಿತಿ ನಿಕಟ ಪೂರ್ವಧ್ಯಕ್ಷ ರತ್ನಕರ ಗೌಡ ಬಳ್ಳಡ್ಕ ಸಭಾ ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಸಮೂಹ ಸಂಪನ್ಮೂಲ ವ್ಯಕ್ತಿ ಜಯಂತ ಮುರುಳ್ಯ ಮುಖ್ಯ ಭಾಷಣ ಮಾಡಿದರು.

ವೇದಿಕೆಯಲ್ಲಿ ಉಬರಡ್ಕ ಶ್ರೀ ನರಸಿಂಹ ದೇವಸ್ಥಾನದ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಿ. ಎಸ್. ಗಂಗಾಧರ, ಶ್ರೀ ನರಸಿಂಹ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎಂ. ಹೆಚ್. ಸುರೇಶ, ಉಬರಡ್ಕ ಮಿತ್ತೂರು ಪ್ರಾ. ಕೃ. ಪ. ಸ ಸಂಘದ ಅಧ್ಯಕ್ಷ ದಾಮೋದರ ಮದುವೆಗದ್ದೆ, ವೀರಭದ್ರ ಭಂಡಾರ ಮನೆಯ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಹರೀಶ್ ಬೂಡುಪನ್ನೆ, ಶ್ರೀ ನರಸಿಂಹ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜತ್ತಪ್ಪ ಗೌಡ ಶೆಟ್ಟಿಮಜಲು, ವೀರಭದ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉಮೇಶ್ ಹುಳಿಯಡ್ಕ, ಪುತ್ತೂರಿನ ವೈದ್ಯೆ ಡಾ. ಯಾದವಿ ಉಪಸ್ಥಿತರಿದ್ದರು.

ನಾಗರಾಜ್ ಸ್ವಾಗತಿಸಿ, ಸುರೇಶ್ ಬೂಡುಪನ್ನೆ ವಂದಿಸಿದರು.

ಮಾಚಿದೇವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ರಚನಾ ಕುಂದರ್ ಮತ್ತು ಮಮತ ಉಮ್ಮಡ್ಕ ಕಾರ್ಯಕ್ರಮ ನಿರೂಪಿಸಿದರು.