ಆಲೆಟ್ಟಿಯ ಮೊರಂಗಲ್ಲು ಉಳ್ಳಾಕುಲು ನೂತನ ಚಾವಡಿಯಲ್ಲಿ ಹಾಗೂ ಗುಂಡ್ಯ ಮಾಡಾರಮನೆ ದೈವಸ್ಥಾನದಲ್ಲಿ ಪ್ರತಿಷ್ಠಾ ಕಲಶೋತ್ಸವ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನಕ್ಕೆ ಸಂಬಂಧಿಸಿದ ಸಪರಿವಾರ ಶ್ರೀ ಉಳ್ಳಾಕುಲು ದೈವಸ್ಥಾನ ಮಾಡಾರಮನೆ ಗುಂಡ್ಯ ಸಾನಿಧ್ಯದ ಮೊರಂಗಲ್ಲು ಎಂಬಲ್ಲಿ ನೂತನವಾಗಿ ನಿರ್ಮಿಸಿದ ಚಾವಡಿಯ ಪ್ರತಿಷ್ಠಾ ಕಲಶೋತ್ಸವವು ಬ್ರಹ್ಮಶ್ರೀ ವೇ| ಕುಂಟಾರು ವಾಸುದೇವ ತಂತ್ರಿಯವರ ಹಾಗೂ ಬ್ರಹ್ಮಶ್ರೀ ವೇ|ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಫೆ.3 ರಂದು ಜರುಗಿತು.

ಫೆ.2 ರಂದು ಬೆಳಗ್ಗೆ ನೂತನ ಚಾವಡಿಯಲ್ಲಿ ಉಗ್ರಾಣ ತುಂಬುವ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಮೊರಂಗಲ್ಲು ಶ್ರೀ ಧೂಮಾವತಿ ದೈವಸ್ಥಾನದಿಂದ ಹಸಿರು ವಾಣಿ ಮೆರವಣಿಗೆಯು ದೈವಸ್ಥಾನದ ಅಧ್ಯಕ್ಷ ಗುರು ಪ್ರಸಾದ್ ರೈ ಯವರ ನೇತೃತ್ವದಲ್ಲಿ ಚಾವಡಿಯ ತನಕ ಸಾಗಿ ಬಂತು.
ಸಂಜೆ ತಂತ್ರಿಯವರಿಂದ ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ವಾಸ್ತು ಹೋಮ, ರಕ್ಷೋಘ್ನ ಹೋಮ,ವಾಸ್ತು ಬಲಿ ಹಾಗೂ ರಾತ್ರಿ ಅನ್ನ ಸಂತರ್ಪಣೆಯಾಯಿತು.
ಮರುದಿನ ಬೆಳಗ್ಗೆ ಗಣಪತಿ ಹವನವಾಗಿ ಗುಂಡ್ಯ ಮಾಡಾರಮನೆಯ ದೈವಸ್ಥಾನದಲ್ಲಿ ಶ್ರೀ ದೈವಗಳ ವಿಗ್ರಹ ಪ್ರತಿಷ್ಠಾ ಕಾರ್ಯ ಹಾಗೂ ಮೊರಂಗಲ್ಲು ಉಳ್ಳಾಕುಲು ಚಾವಡಿ ಯಲ್ಲಿ ಶ್ರೀ ದೈವಗಳ ಆಯುಧ ಪ್ರತಿಷ್ಠೆಯಾಗಿ ಕಲಶವು ನೆರವೇರಿತು. ಮಧ್ಯಾಹ್ನಮಹಾಪೂಜೆಯಾಗಿ ನಿತ್ಯ ನೈಮಿತ್ಯಾದಿ ನಿರ್ಣಯವಾಗಿ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.