ಜಯನಗರ ರಸ್ತೆ ದುರಸ್ಥಿಕರಣ ಹಿನ್ನಲೆಯಲ್ಲಿ ಸುಳ್ಯ ನಗರ ಪಂಚಾಯತ್ ನ 15 ನೇ ಹಣಕಾಸು ಯೋಜನಡಿಯಲ್ಲಿ ರಸ್ತೆ ಕಾಂಕ್ರಿಟೀಕರಣಕ್ಕೆ ಫೆ. 3 ರಂದು ಗುದ್ದಲಿಪೂಜೆ ನೆರವೇರಿತು.
ಸುಮಾರು 3.50 ಲಕ್ಷ ರೂಗಳ ವೆಚ್ಚದಲ್ಲಿ 65 ಮೀಟರ್ ರಸ್ತೆ ದುರಸ್ಥಿ ಕಾಮಗಾರಿ ನಡೆಯಲಿದೆ. ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದರೆ ರವರು ಗುದ್ದಲಿ ಪೂಜೆ ನೆರವೇರಿಸಿದರು.




ಈ ಸಂಧರ್ಭದಲ್ಲಿ ಉಪಾಧ್ಯಕ್ಷ ಬುದ್ಧ ನಾಯ್ಕ್,ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಸೇಠ್, ಸ್ಥಳೀಯ ಸದಸ್ಯರಾದ ಶಿಲ್ಪಾ ಸುದೇವ್, ನ. ಪಂ ಮುಖ್ಯ ಅಧಿಕಾರಿ ಸುಧಾಕರ್, ಸುಳ್ಯ ಬಿ ಜೆ ಪಿ ಸುಳ್ಯ ನಗರ ಶಕ್ತಿ ಕೇಂದ್ರದ ಕಾರ್ಯದರ್ಶಿ ನಾರಾಯಣ ಶಾಂತಿನಗರ,ಜಯನಗರ ಅಂಗನವಾಡಿ ಶಿಕ್ಷಕಿ ತಿರುಮಲೇಶ್ವರಿ,ಸ್ಥಳೀಯ ನಿವಾಸಿ ರಾಧಾಕೃಷ್ಣ ನಾಯಕ್, ಸಂಶುದ್ದೀನ್, ಅನ್ವರ್,ಉಪನ್ಯಾಸಕ ರಾಧಾಕೃಷ್ಣ, ದಾಮೋದರ ಗೌಡ, ರಂಜಿತ್, ಗುತ್ತಿಗೆದಾರ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.
