ಉಬೈಸ್ ಗೂನಡ್ಕ ರವರಿಗೆ ರಾಷ್ಟ್ರೀಯ ಪ್ರೇರಣಾ ದೂತ ಪ್ರಶಸ್ತಿ

0

ಗೂನಡ್ಕ ನಿವಾಸಿ ಉಬೈಸ್ ರವರಿಗೆ ಸಿಲ್ವರ್ ಮೆಡಲ್ ಮತ್ತು ರಾಷ್ಟ್ರೀಯ ಪ್ರೇರಣಾ ದೂತ ಪ್ರಶಸ್ತಿ ಲಭಿಸಿದೆ.

ರಾಮಕೃಷ್ಣ ಮಠದ ಕಾರ್ಯದರ್ಶಿ ಸ್ವಾಮಿ ಅತಿದೇವಾನಂದ ಮಹಾರಾಜ್ ರವರು ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂಧರ್ಭದಲ್ಲಿ ಹಿರಿಯ ಐಎಎಸ್ ಅಧಿಕಾರಿ ರಿತೇಶ್ ಕುಮಾರ್ ಮತ್ತು ಬಿಹಾರದ ಮಾಜಿ ಕಾರ್ಮಿಕ ಸಚಿವ ಸುರೇಂದ್ರ ರಾಂ ಉಪಸ್ಥಿತರಿದ್ದರು.

ಉಬೈಸ್ ಗೂನಡ್ಕ ಅವರು ಯೆನೆಪೋಯಾ ವಿಶ್ವವಿದ್ಯಾಲಯದಲ್ಲಿ ಸಕ್ರಿಯ ಎನ್ ಎಸ್ ಎಸ್ ಸ್ವಯಂಸೇವಕರಾಗಿ ಮತ್ತು ತುರ್ತು ರಕ್ತದಾನಿಯಾಗಿ ಹೆಸರು ಮಾಡಿದ್ದಾರೆ. ಯೆನಪೋಯಾ ಕಾಲೇಜಿನ ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿರುವ ಇವರು ರಾಷ್ಟ್ರೀಯ ಶಿಬಿರದಲ್ಲೂ ಭಾಗವಹಿಸಿದ್ದಾರೆ.
ಎನ್ ಎಸ್ ಎಸ್ ಮತ್ತು ಸಾಮಾಜಿಕ ಸೇವೆಯಲ್ಲಿನ ಅವರ ಸಾಧನೆಗಳನ್ನು ಗುರುತಿಸಿ ಬಿಹಾರ ಸರ್ಕಾರ ಮತ್ತು ಫೇಸ್ ಆಫ್ ಫ್ಯೂಚರ್ ಇಂಡಿಯಾ ಸಂಸ್ಥೆ ಇವರನ್ನು ರಾಷ್ಟ್ರೀಯ ಪ್ರೇರಣಾ ದೂತ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಪ್ರಸ್ತುತ ಉಬೈಸ್ ರವರು ಯೆನಪೋಯಾ ವಿಶ್ವವಿದ್ಯಾಲಯದಲ್ಲಿ ಬಿ. ಕಾಮ್ ಎ ಸಿ ಸಿ ಎ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎನ್ ಎಸ್ ಯು ಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಅವರು ಅನೇಕ ಪ್ರತಿಭಟನಗಳಲ್ಲಿ ಭಾಗವಹಿಸಿದ್ದು, ವಿದ್ಯಾರ್ಥಿ ಪರವಾಗಿ ಅನೇಕ ಹೋರಾಟಗಳಲ್ಲಿ ಗುರುತಿಸಿದ್ದಾರೆ.
ಇವರು ಗೂನಡ್ಕ ತೆಕ್ಕಿಲ್ ಶಾಲೆಯ ಪ್ರಾಥಮಿಕ ಶಿಕ್ಷಣ ಪಡೆದು ಅರಂತೋಡು ಎನ್ ಎಂ ಪಿ ಯು ಶಾಲೆಯ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು ಗೂನಡ್ಕ ನಿವಾಸಿ ಉಮ್ಮರ್ ಹಾಜಿ ಗೂನಡ್ಕ ಮತ್ತು ತಾಯಿ ಎಂ ಪಿ ರುಖ್ಯ ರವರ ಪುತ್ರ.