ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಅಪೂರ್ವ ಲಕ್ಷ್ಮಿ ಅವರಿಗೆ “ಯೋಗ ಪ್ರತಿಭಾ ಆವಾರ್ಡ್” ಲಭಿಸಿದೆ.
ಬೆಂಗಳೂರಿನ ಶಿವಜ್ಯೋತಿ ಯೋಗ ಕೇಂದ್ರ ವತಿಯಿಂದ ಜ.24 ರಿಂದ ಜ.26 ರ ವರೆಗೆ ಬಿ.ಕೆ.ಎಸ್ ಅಯ್ಯಂಗಾರ್ ಸ್ಮರಣಾರ್ಥ ನಡೆದ ರಾಷ್ಟ್ರೀಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ 8-12 ವಯೋಮಾನ ವಿಭಾಗದಲ್ಲಿ 6 ನೇ ಸ್ಥಾನ ಪಡೆದು “ಯೋಗ ಪ್ರತಿಭಾ ಆವಾರ್ಡ್” ಪಡೆದರು.
. ಇವರು ಕುಮಾರಸ್ವಾಮಿ ವಿದ್ಯಾಲಯದ 4 ನೇ ತರಗತಿ ವಿದ್ಯಾರ್ಥಿನಿ, ಸುಬ್ರಹ್ಮಣ್ಯ ನೂಚಿಲ ನಿವಾಸಿ ಕುಕ್ಕೆಶ್ರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂದಿ ಶಿವ ಸುಬ್ರಹ್ಮಣ್ಯ ಭಟ್ ಮತ್ತು ಸುಮತಿ ದಂಪತಿಗಳ ಪುತ್ರಿ.