ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಗಡಿಕಲ್ಲು ಇದರ ವಿಷ್ಣುಮೂರ್ತಿ ದೈವದ ಒತ್ತೆಕೋಲ ಉತ್ಸವ ಫೆ.15 ಮತ್ತು ಫೆ.16 ರಂದು ನಡೆಯಲಿದೆ .
ಫೆ.15ರಂದು ಬೆಳಗ್ಗೆ ಅಗ್ನಿಕುಂಡ ಜೋಡಣೆ ನಡೆಯಲಿದ್ದು ಬಳಿಕ ಗಣ ಹೋಮ, ಉಗ್ರಾಣ ಮೂಹರ್ತ ನಡೆದು ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ ದೇವಸ್ಥಾನದಿಂದ ಬಂಡಾರ ತೆಗೆದು ಬಳಿಕ ತೊಡಂಙಲ್ ನಡೆದು ಮೇಲೇರಿಗೆ ಅಗ್ನಿ ಸ್ಪರ್ಶ ನಡೆಯಲಿದೆ . ರಾತ್ರಿ 8 ರಿಂದ ಅಂಗನವಾಡಿ ಪುಟಾಣಿ ಗಳಿಂದ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಸ್ಥಳೀಯ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ . ರಾತ್ರಿ ಅನ್ನ ಸಂತರ್ಪಣೆ ನಡೆದು ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರಿಯಲಿದೆ. ಫೆ. 16ರ ಬೆಳಿಗ್ಗೆ 4:30ಕ್ಕೆ ಶ್ರೀದೇವರ ಅಗ್ನಿ ಪ್ರವೇಶ ನಡೆದು ಬಾರಣೆ, ಮಾರಿಕಳ ಗುಳಿಗ ನೇಮ ನಡೆದು ಪ್ರಸಾದ ವಿತರಣೆ ನಡೆಯಲಿದೆ.