ಮುರುಳ್ಯ ಗ್ರಾ. ಪಂ. ಉದ್ಯೋಗಿ ರಂಜಿನಿಯವರು ಮೈಸೂರಿನ ಚಾಮುಂಡಿ ವಿಹಾರದಲ್ಲಿ ನಡೆದ ರಾಜ್ಯಮಟ್ಟದ ಜಾವಲಿನ್ ಥ್ರೋ ನಲ್ಲಿ ಭಾಗವಹಿಸಿ ಪದಕ ವಿಜೇತರಾಗಿ ಫೆ. 17 ರಿಂದ 20 ರವರೆಗೆ ತಮಿಳುನಾಡಿನ ಚೆನೈ ಅಲ್ಲಿ ನಡೆಯಲಿರುವ ನ್ಯಾಷನಲ್ ಅಥ್ಲೆಟಿಕ್ಸ್ ಆಯ್ಕೆಯಾಗಿದ್ದಾರೆ.
ಇವರು ಎಡಮಂಗಲ ಗ್ರಾಮದ ಶಾಂತಿಯಡ್ಕ ಜನಾರ್ಧನ ಮತ್ತು ಜಯಂತಿ ದಂಪತಿಯ ಪುತ್ರಿಯಾಗಿದ್ದು, ಮುರುಳ್ಯ ಗ್ರಾ. ಪಂ. ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಎಣ್ಮೂರಿನ ದೈಹಿಕ ಶಿಕ್ಷಕರಾದ ರಾಮಚಂದ್ರರವರಿಂದ ತರಬೇತಿ ಪಡೆಯುತ್ತಿದ್ದಾರೆ.