
ಎಡಮಂಗಲ ಗ್ರಾಮದ ಕೇರ್ಪಡ ಕೂಡು ಕಟ್ಟು ಶಿರಾಡಿ ರಾಜನ್ ದೈವ ಮತ್ತು ಸಪರಿವಾರ ದೈವಗಳ ದೊಂಪದ ಬಲಿ ಉತ್ಸವ ಫೆ.10ರಂದು ನಡೆಯಿತು.
ಬೊಳ್ಕಜೆ ಸ್ಥಾನ ಚಾವಡಿಯಿಂದ ಭಂಡಾರ ಹಿಡಿದು, ನೇಮೋತ್ಸವ ನಡೆಯಿತು.

ಇಂದು ಬೆಳಿಗ್ಗೆ ಕೈ ಕಾಣಿಕೆ, ಹರಿಕೆ ಆಗಿ ಪ್ರಸಾದ ವಿತರಣೆ ಬಳಿಕ ಅಲೆಕ್ಕಾಡಿ ಮಾರ್ಗವಾಗಿ ಮಾರಿಕ್ಕಳ ಸಾಗಿ ಮಾಡಗದ್ದೆಯಲ್ಲಿ ಸಮಾಪ್ತಿಯಾಯಿತು.
ಫೆ.9ರಂದು ಬೆಳಿಗ್ಗೆ ಪಂಜುರ್ಲಿ ದೈವದ ನೇಮ ನಡೆದು, ರಾತ್ರಿ ಕೇರ್ಪಡ ಗೌಡ ಮನೆತನದ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಎಂಜೀರು ಪದ್ಮನಾಭ ರೈ, ಕಾರ್ಯದರ್ಶಿ ಸಾಯಿಪ್ರಸಾದ್ ಬೊಳ್ಕಜೆ, ಕೋಶಾಧಿಕಾರಿ ಅವಿನಾಶ್ ದೇವರಮಜಲು, ಊರು ಗೌಡರಾದ ಚೆನ್ನಪ್ಪ ಗೌಡ ಕೇರ್ಪಡ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.