ಸುಳ್ಯ ನಗರದ ಬೂಡು ಕಾಲನಿಯಲ್ಲಿ ನಗರ ಪಂಚಾಯತ್ ಅನುದಾನದಲ್ಲಿ ಮಾಡಲಾಗಿರುವ ಕಾಂಕ್ರೀಟ್ ರಸ್ತೆಯ ಉದ್ಘಾಟನೆ ಫೆ. 16ರಂದು ನೆರವೇರಿತು.
ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ವಿನಯ ಕುಮಾರ್ ಕಂದಡ್ಕ ಹಾಗೂ ಎಂ.ವೆಂಕಪ್ಪ ಗೌಡರು ಹಾಗೂ ಸ್ಥಳೀಯರಿದ್ದು ರಸ್ತೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರಿಬ್ಬರೂ “ಈ ಭಾಗದ ನಿವಾಸಿಗಳ ಬೇಡಿಕೆಯ ರಸ್ತೆಯ ಅಭಿವೃದ್ಧಿಯನ್ನು ವಾರ್ಡ್ ಸದಸ್ಯರಾದ ರಿಯಾಜ್ ಮಾಡಿದ್ದಾರೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ವಾರ್ಡ್ ಸದಸ್ಯ ರಿಯಾಜ್ ಕಟ್ಟೆಕಾರ್, ನ.ಪಂ. ನಾಮನಿರ್ದೇಶಿತ ಸದಸ್ಯ ರಾಜು ಪಂಡಿತ್, ಉಮ್ಮರ್ ಕುರುಂಜಿಗುಡ್ಡೆ, ಹಿರಿಯರಾದ ಕುಂಞ ಬೂಡು, ಉಮೇಶ್ ಬೂಡು, ಅಂಗನವಾಡಿ ಕಾರ್ಯಕರ್ತೆ ಕವಿತಾ ಹಾಗೂ ಸ್ಥಳೀಯ ಯುವಕರಿದ್ದರು.
ಪ್ರಕಾಶ್ ಬೂಡು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.