ಅರಂತೋಡು ಗ್ರಾಮದ ಬಾಜಿನಡ್ಕ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ಹಾಗೂ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ಟ್ರಸ್ಟ್ ವತಿಯಿಂದ 3 ವರ್ಷಕ್ಕೊಮ್ಮೆ ನಡೆಯುವ 40 ನೇ ವರ್ಷದ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಗಳ ನೇಮೋತ್ಸವವು ಮಾರ್ಚ್ 8 ಮತ್ತು ಮಾರ್ಚ್ 9 ರಂದು ನಡೆಯಲಿರುವುದು.
ಮಾರ್ಚ್ 8 ರಂದು ಶ್ರೀ ಅಂಬರೀಷ್ ಭಟ್ ಅವರ ಪೌರೋಹಿತ್ಯದಲ್ಲಿ ಬೆಳಿಗ್ಗೆ 7.00 ಕ್ಕೆ ಗಣಪತಿ ಹವನ, ಅಪರಾಹ್ನ 3.00 ಕ್ಕೆ ಮಂತ್ರವಾದಿ ಗುಳಿಗ ದೈವದ ಕೋಲ, ಅಪರಾಹ್ನ 6.00 ಕ್ಕೆ ಮೊಗೇರ ದೈವಗಳ ಭಂಡಾರ ತೆಗೆಯುವುದು. ಸಂಜೆ 6.30 ರಿಂದ ಸಭಾ ಕಾರ್ಯಕ್ರಮ ನಡೆಯಲಿರುವುದು. ರಾತ್ರಿ 9.00 ಕ್ಕೆ ಅನ್ನಸಂತರ್ಪಣೆ, ನಂತರ ರಾತ್ರಿ 10.00 ಕ್ಕೆ ಮೊಗೇರ ದೈವಗಳ ಗರಡಿ ಇಳಿಯುವುದು. ರಾತ್ರಿ 12.00 ಕ್ಕೆ ತನ್ನಿಮಾನಿಗ ದೈವದ ಗರಡಿ ಇಳಿಯುವುದು.
ಮಾರ್ಚ್ 9 ರಂದು ಮುಂಜಾನೆ ಗಂಟೆ 3.00 ಕ್ಕೆ ಪೂಜಾರಿಗಳ ದರ್ಶನ ಹಾಗೂ ಮೊಗೇರರ ಗಡಿ ಒಪ್ಪಿಸುವಿಕೆ, ಬೆಳಿಗ್ಗೆ 5.00 ಕ್ಕೆ ಹರಕೆ ಹಾಗೂ ಪ್ರಸಾದ ವಿತರಣೆ, ಪೂರ್ವಾಹ್ನ ಗಂಟೆ 8.30 ರಿಂದ ಸಾರ್ಲಪಟ್ಟದ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆದು ಮದ್ಯಾಹ್ನ 12.30 ರಿಂದ ಅನ್ನಸಂತರ್ಪಣೆ ನಡೆಯಲಿದೆ.