ಸುಳ್ಯದ ಬಾಳೆಮಕ್ಕಿಯಲ್ಲಿ ಇಬ್ಬರು ಕುಡುಕರು ಹೊಡೆದಾಟ ನಡೆಸಿಕೊಂಡ ಘಟನೆ ವರದಿಯಾಗಿದೆ.
ಅವರಿಬ್ಬರು ಹೊಡೆದಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಂದಂಕಿ ಲಾಟರಿ ನಡೆಯುವ ಸಂಸ್ಥೆಯ ಮುಂಭಾಗ ಆರಂಭಗೊಂಡ ಹೊಡೆದಾಟ ಮುಖ್ಯ ರಸ್ತೆಯ ತನಕ ತಲುಪಿತು. ವಿಷಯ ಪೋಲೀಸರಿಗೆ ತಿಳಿದು ಸ್ಥಳಕ್ಕೆ ಬಂದ ಪೋಲೀಸರು ಒಬ್ಬನನ್ನು ರಿಕ್ಷಾದಲ್ಲಿ ಹಾಕಿ ಠಾಣೆಗೆ ಕರೆದುಕೊಂಡು ಹೋದರು.
ರಸ್ತೆಯ ಬದಿಯಲ್ಲಿ ಹಾಕಲಾದ ತಡೆಬೇಲಿಯನ್ನು ಅಲುಗಾಡಿಸಿ ಕುಡುಕರು ಬೀಳಿಸಿದರು.ಅದು ಫುಟ್ ಪಾತ್ ನ ಆಧಾರದಲ್ಲಿ ಇದೀಗ ನಿಂತಿದೆ.